Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನದ ನೇಮೋತ್ಸವ ,ಆಮಂತ್ರಣ ಪತ್ರಿಕೆ ಬಿಡುಗಡೆ

ಮುಲ್ಕಿ :ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತಕ್ಕೊಳಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನದಲ್ಲಿ  ಎ. 11ರಿಂದ 13 ರ ವರೆಗೆ ನಡೆಯಲಿರುವ ಶ್ರೀ ಜಾರಂದಾಯ,ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ ಆಮಂತ್ರಣ ಪತ್ರಿಕೆಯನ್ನು ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನದಲ್ಲಿ  ಬಿಡುಗಡೆಗೊಳಿಸಲಾಯಿತು.ಈ ಸಂದರ್ಭ ದೈವಸ್ಥಾನದ  ಗುರಿಕಾರರು,ದೈವಸ್ಥಾನದ  ಸಮಿತಿ, ಮಹಿಳಾ ಮಂಡಳಿ ಹಾಗೂ  ಜಾರಂದಾಯ ಧೂಮಾವತಿ ಯೂತ್‌ ಕ್ಲಬ್‌ ನ  ಪದಾಧಿಕಾರಿಗಳು ಉಪಸ್ಥಿತರಿದ್ದರು.