Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿಗೌಡ ಸಾರಸ್ವತ ಬ್ರಾಹ್ಮಣ ಸಭಾ ಆಶ್ರಯದಲ್ಲಿ:ವಧೂವರರ ಅನ್ವೇಷಣೆ-ಸಂಬಂಧ: ಆನ್‌ಲೈನ್ ನೋಂದಣೆಗೆ ಚಾಲನೆ

ಮುಲ್ಕಿ:ಗೌಡ ಸಾರಸ್ವತ ಬ್ರಾಹ್ಮಣ ಸಭಾ ಆಶ್ರಯದಲ್ಲಿ ದ್ವಿತೀಯ ಬಾರಿಗೆ ವಧೂವರರ ಅನ್ವೇಷಣೆ ಸಂಬಂಧ ವೈವಾಹಿಕ ಸಮಾವೇಶದ ಹಿನ್ನೆಲೆಯಲ್ಲಿ ಆನ್‌ಲೈನ್ ನೋಂದಣೆಗೆ ಚಾಲನೆ ನೀಡಲಾಗಿದೆ. ಬುಧವಾರ ಮುಲ್ಕಿ ಜಿಎಸ್‌ಬಿ ಸಭಾಗೃಹದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಒಳಲಂಕೆ ಶ್ರೀ ವೆಂಕಟರಮಣ ದೇವಳದ ಮೊಕ್ತೇಸರ  ಆತುಲ್‌ ಕುಡ್ವ ಅವರು  ಮಾಹಿತಿ ನೀಡಿದರು.
 ಆಗಸ್ಟ್ 23 ಸಂಬಂಧ' ವೈವಾಹಿಕ ಸಮಾವೇಶ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಕೊಡಗು, ಬೆಂಗಳೂರು, ಮೈಸೂರು ಮತ್ತು ಗೋವಾ, ಮಹಾರಾಷ್ಟ್ರ ರಾಜ್ಯದ ಬಿಎಸ್‌ಬಿ ಸಮಾಜ ಬಾಂಧವರಿಗಾಗಿ ವಧೂವರರ ಅನ್ವೇಷಣೆ "ಸಂಬಂಧ" ವೈವಾಹಿಕ ಸಮಾವೇಶವು ಆಗಸ್ಟ್ 23ಭಾನುವಾರ ಮುಲ್ಕಿ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದಲ್ಲಿ ಹಮ್ಮಿಕೊಳ್ಳಲಾಗಿದೆ' ಎಂದರು. ಎಲ್ಲ ಸಮಾಜದಲ್ಲಿ ವೈವಾಹಿಕ ಪ್ರಮುಖ ಸಮಸ್ಯೆಯಾಗಿದ್ದು, ಅದಕ್ಕಾಗಿ ಸಂಬಂಧ' ಅನ್ವೇಷಣೆ ನಡೆಸಲಾಗುತ್ತಿದೆ. ಮುಂದೆ ನಿರಂತರ ಕಾರ್ಯಕ್ರಮ ನಡೆಯಲಿದೆ ಎಂದರು.

ಆನ್‌ಲೈನ್‌ ಮುಖಾಂತರ ಮಾತ್ರವೇ ನೋಂದಣೆಗೆ ಅವಕಾಶ ಕಲ್ಪಿಸಲಾಗಿದ್ದು, ಆಗಸ್ಟ್ 1ರ ಒಳಗೆ ನೋಂದಾವಣೆ ಕಡ್ಡಾಯವಾಗಿದೆ. ವಧೂವರರ ಕಡೆಯಿಂದ ತಲಾ ಇಬ್ಬರಿಗೆ ಮಾತ್ರ ಸಮಾವೇಶದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. 2024ರಲ್ಲಿ ಪ್ರಥಮ ಬಾರಿಗೆ ಮುಲ್ಕಿಯಲ್ಲಿ ನಡೆಸಲಾದ ವಧೂವವರ ಅನ್ವೇಷಣೆಯಲ್ಲಿ 1200ಕ್ಕೂ ಅಧಿಕ ನೋಂದಣೆ ನಡೆದಿತ್ತು.
ಮಂಗಳೂರಿನ ವಂದನಾ ನಾಯಕ್‌ ಆನ್‌ಲೈನ್‌ ಆ್ಯಪ್‌ಗೆ ಚಾಲನೆ ನೀಡಿ ಶುಭಹಾರೈಸಿದರು.

ಒಳಲಂಕೆ ದೇವಳದ ದರ್ಶನ ಪಾತ್ರಿ ಸತ್ಯನಾರಾಯಣ ನಾಯಕ್‌ ಮಾತನಾಡಿದರು. ಜಿಎಸ್‌ಬಿ ಸಭಾ ಅಧ್ಯಕ್ಷ ಎಂ.ಸತ್ಯೇಂದ್ರ ಶೆಣೈ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವಿಶ್ವ ನಾಥ ಶೆಣೈ ವಂದಿಸಿದರು. ನರಸಿಂಹ ಭಟ್, ಪಂಡರಿನಾಥ ಶೆಣೈ, ವಕೀಲ ಸತೀಶ್‌ ಕಾಮತ್, ನಾಗೇಶ್ ಪೈ, ಪಾಂಡುರಂಗ ಭಟ್, ಕಾಮಾಕ್ಷಿ ಆ‌ರ್.ನಾಯಕ್ ಮತ್ತಿತರರು ಉಪಸ್ಥಿತರಿದ್ದರು.