Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿನ್ನಿಗೋಳಿ ಪ.ಪಂ ಎಕಬಳಕೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ

ಕಿನ್ನಿಗೋಳಿ  : ಮುಂದಿನ ಒಂದು ತಿಂಗಳ ಕಾಲ ಸಂತೆ ಹಾಗೂ ಅಂಗಡಿ ಮುಂಗಟ್ಟು ಗಳಲ್ಲಿ  ಏಕಬಳಕೆಯ ಪ್ಲಾಸ್ಟಿಕ್ ನಿಷೇಧದ  ಬಗ್ಗೆ  ಸಾರ್ವಜನಿಕರಿಗೆ  ಜಾಗೃತಿಯನ್ನು  ಮೂಡಿಸುವ ಕಾರ್ಯ ನಡೆಯಲಿದೆ  ಎಂದು ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಹೇಳಿದರು.ಅವರು ಸ್ವಚ್ಚಭಾರತ್ ಮಿಷನ್ - 2( ನಗರ ) ಯೋಜನೆಯಡಿಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಎಕಬಳಕೆಯ ಪ್ಲಾಸ್ಟಿಕ್ ನಿಷೇಧದ  ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಂಗವಾಗಿ ಮೂರು ಕಾವೇರಿಯಿಂದ ಕಿನ್ನಿಗೋಳಿ ವರೆಗೆ ನಡೆದ  ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮಾದರಿ ಯಾಗುವ ನಿಟ್ಟಿನಲ್ಲಿ ಸಾರ್ವಜನಿಕರು ಗ್ರಾಮಸ್ಥರು ಸಹಕಾರ ನೀಡಬೇಕು.  ಕಸ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ. ರಸ್ತೆ ಬದಿಯಲ್ಲಿ ಎಸೆಯಬೇಡಿ .ಒಣ ಕಸ ಹಾಗೂ ಹಸಿಕಸವನ್ನು ವಿಂಗಡನೆ ಮಾಡಿ ಕೋಟ್ಟು ಸಹರಿಸಿರಿಸಿ ಎಂದು ತಿಳಿಸಿದರು. 
ಸರಕಾರದ ಪರಿಸರ ಹಾಗೂ ಪ್ರವಾಸೋಧ್ಯಮ ಮಂಡಳಿ ಅಧ್ಯಕ್ಷೆ   ಶಾಲೆಟ್ ಪಿಂಟೋ ಅವರು ಮಾತನಾಡಿದರು.

ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಜಯಶಂಕರ್, ಪೊಂಪೈ ಕಾಲೇಜಿನ ಪ್ರಾಚಾರ್ ಡಾ.ಪುರುಷೋತ್ತಮ ಕೆ. ವಿ, ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಕಿನ್ನಿಗೋಳಿ ರೋಟರಿ ಕ್ಲಬ್ ನ  ಅಧ್ಯಕ್ಷ ಸಾಯಿನಾಥ ಶೆಟ್ಟಿ, ಉದ್ಯಮಿ ದೀಪಕ್‌ ರೋಡ್ರಿಗಸ್, ಸ್ಟೇನಿ ಪಿಂಟೋ ಕಿನ್ನಿಗೋಳಿ, ಪಟ್ಟಣ ಪಂಚಾಯತ್ ಸದಸ್ಯರಾದ ಶೈಲೇಶ್‌ ಅಂಚನ್, ಪ್ರಣೀಕ್ ಕೋಟ್ಯಾನ್, ದಾಮೋದರ ಶೆಟ್ಟಿ, ಸುನೀತಾ ರೋಡ್ರಿಗಸ್, ಪ್ರಕಾಶ್ ಆಚಾ‌ರ್, ಗೋಪಾಲಕೃಷ್ಣ ಪುನರೂರು, ಕುಶಲತಾ, ಕೋಕಿಲ,   ಪೀಲ್ಡ್‌ ಸುಪರ್‌ವೈಸರ್ ರವೀಂದ್ರ ಡಿಎಸ್, ಸುಬಾಷ್‌ ಸಾಗರ್, ಕೋ ಆರ್ಡಿನೇಟರ್  ಅಬಿಷೇಕ್ ಪಂಡಿತ್, ಹಾಗೂ ಶಾಲಾ ಮುಖ್ಯಸ್ಥರು ಉಪಸ್ಥಿರಿದ್ದರು.