Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಸ ಎಸೆದರೆ ಬೀಳುತ್ತೆ ದಂಡ,ಕಿನ್ನಿಗೋಳಿ ಪ.ಪಂ ನಿಂದ ಎಚ್ಚರಿಕೆ

ಕಿನ್ನಿಗೋಳಿ :ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಲವೆಡೆಗಳಲ್ಲಿ  ವಾಹನಗಳಲ್ಲಿ ಬಂದು   ಅಲ್ಲಲ್ಲಿ ತ್ಯಾಜ್ಯವನ್ನು ಸುರಿಯುತ್ತಿರುವುದು ಕಂಡುಬಂದಿದ್ದು, ಮುಂದಿನ‌ ದಿನಗಳ ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ ಕ್ಯಾಮಾರ ಅಳವಡಿಸಿ ದಂಡ ವಿಧಿಸಲಾಗುವುದು ಎಂದು‌ ಕಿನ್ನಿಗೋಳಿ‌ ಪಟ್ಟಣ ಪಂಚಾಯತ್  ನ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಹೇಳಿದರು. ಅವರು ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಟೀಲು ಸಮೀಪದ  ಮಲ್ಲಿಗೆಯಂಗಡಿ, ಬಲವಿನಗುಡ್ಡೆ ರಸ್ತೆಯ ಸೇತುವೆ ಬಳಿ ಪಂಚಾಯತ್ ವತಿಯಿಂದ ತ್ಯಾಜ್ಯವನ್ನು ಸ್ವಚ್ಚಗೊಳಿಸಿ ಮಾತನಾಡಿದರು.ಪಟ್ಟಣ  ಪಂಚಾಯತ್ ವ್ಯಾಪ್ತಿಯ ಹೆಚ್ಚಿನ ಕಡೆಗಳಲ್ಲಿ ಈಗಾಗಲೇ 
ಬ್ಯಾನರ್ ಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭ ಸದಸ್ಯರಾದ ಶೈಲೇಶ್ ಅಂಚನ್, ಪ್ರಕಾಶ್ ಆಚಾರ್ಯ, ಮಲ್ಲಿಕಾ ಪ್ರಕಾಶ್, ಈಶ್ವರ್ ಕಟೀಲ್, ಚಂದ್ರಶೇಖರ್ ಬರ್ಕೆ,  ಹರೀಶ್ ಶೆಟ್ಟಿ ಸಾಂತ್ಯ, ಕಿರಣ್ ಶೆಟ್ಟಿ, ಸಾಹಸ್ ಎನ್ ಜಿ ಓ , ರವೀಂದ್ರ ಡಿ.ಎಸ್, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.