Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ರಾಷ್ಟ್ರಮಟ್ಟದ ಪತ್ರ ಬರವಣಿಗೆಯಲ್ಲಿ ಕಟೀಲು ಶಾಲೆಯ ವಿದ್ಯಾರ್ಥಿನಿ ಪುಣ್ಯಶ್ರೀ ಪ್ರಥಮ

ಕಟೀಲು : 18 ವರ್ಷ ಒಳಗಿನ ವಿಭಾಗದಲ್ಲಿ ನನ್ನ ಆದರ್ಶ ವ್ಯಕ್ತಿಗೆ ಪತ್ರ ಬರೆಯುವ ರಾಷ್ಟ್ರ ಮಟ್ಟದ ಪತ್ರ ಬರವಣಿಗೆ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಕಟೀಲು ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಪುಣ್ಯಶ್ರೀ ಪ್ರಥಮ ಬಹುಮಾನ ಪಡೆದಿದ್ದು, ರೂ. 25000 ನಗದು ಬಹುಮಾನ ಪಡೆದಿದ್ದಾಳೆ. ಶ್ರೀನಿವಾಸನಗರ ಅಂಚೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನವನ್ನು ನೀಡಲಾಯಿತು.