Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಐಕಳ ಕಂಬಳ ರಸ್ತೆ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸ

ಕಿನ್ನಿಗೋಳಿ  : ಶಾಸಕರು ಹಾಗೂ ಸಂಸದರ ಸತತ ಪ್ರಯತ್ನದಿಂದ  ಗ್ರಾಮೀಣ ಭಾಗದ ಹೆಚ್ಚಿನ ರಸ್ತೆಗಳು  ಅಭಿವೃದ್ದಿಯತ್ತ ಸಾಗುತ್ತಿದೆ.ಇನ್ನಷ್ಟುರಸ್ತೆಗಳು ಅಭಿವೃದ್ದಿಯನ್ನು ಕಾಣಲಿದೆ ಎಂದು  ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಅಧ್ಯಕ್ಷ ಗುರುರಾಜ್ ಎಸ್ ಮಲ್ಲಿಗೆಯಂಗಡಿ ಹೇಳಿದರು.  ಅವರು   ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೊಟ್ಯಾನ್  ಅವರ ಸುಮಾರು ಒಂದು ಕೋಟಿ ವೆಚ್ಚದ ಅನುದಾನದಲ್ಲಿ  ಕಾಂಕ್ರೀಟಿಕರಣಗೊಳ್ಳಲಿರುವ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಐಕಳ ಕಂಬಳ ರಸ್ತೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಏಳಿಂಜೆ ಶ್ರೀ ಲಕ್ಷ್ಮ್ಮೀ ಜನಾರ್ದನ ದೇವಸ್ಥಾನದ ಅರ್ಚಕ ಗಣೇಶ್ ಭಟ್  ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭ ಐಕಳ ಗ್ರಾ ಪಂ ಮಾಜೀ ಅಧ್ಯಕ್ಷೆ ಸುಗುಣ ಪೂಜಾರ್ತಿ, ಮಾಜೀ ಸದಸ್ಯರಾದ ಅನಿತಾ ಡಿಕೋಸ್ಟ, ದಯೇಶ್ ಕೊಟ್ಯಾನ್, ಚೇತನ್ ಶೆಟ್ಟಿ, ಕಿನ್ನಿಗೋಳಿ ಪ. ಪಂ ಸದಸ್ಯ ಪ್ರಣೀಕ್, ಸ್ವರಾಜ್ ಶೆಟ್ಟಿ ಮುಂಡ್ಕೂರು  ದೊಡ್ಡಮನೆ ,ಭಾಸ್ಕರ್ ಶೆಟ್ಟಿ ಏಳಿಂಜೆ,ಜಯಪಾಲ ಶೆಟ್ಟಿ ಐಕಳ, ಹರೀಶ್ ಶೆಟ್ಟಿ ತಾಮಣಿ ಗುತ್ತು, ರಮೇಶ್ ಐಕಳ, ಶ್ರೀಶ ಸರಾಫ್‌, ಲಕ್ಷ್ಮಣ್ ಸಾಲ್ಯಾನ್ ಪುನರೂರು, ಫ್ರಾನ್ಸಿಸ್ ಡಿಕೋಸ್ಟ, ಐಕಳ ಕಾಂತಾ ಬಾರೆ ಬೂದಾ ಬಾರೆ ಫ್ರೆಂಡ್ಸ್ ನ ಅಧ್ಯಕ್ಷ ತಾರಾನಾಥ ಶೆಟ್ಟಿ ಐಕಳ, ಗುತ್ತಿಗೆದಾರ ಲೋಕೇಶ್ ರಾಜು ಮೊದಲಾದವರು ಉಪಸ್ಥಿತರಿದ್ದರು