Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಹಳೆಯಂಗಡಿ: ಸಹಕಾರಿ ಕ್ಷೇತ್ರಕ್ಕೆ ದಿ. ನಾರಾಯಣ ಸನಿಲ್ ಕೊಡುಗೆ ಅಪಾರ-ಜ್ಯೋತಿಷಿ ವಿಶ್ವನಾಥ ಭಟ್



ಹಳೆಯಂಗಡಿ : ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಸಂಘದ ಪ್ರೇರಣಾಶಕ್ತಿ, ಸಹಕಾರಿ ರಂಗದ ಭೀಷ್ಮ ಎಚ್. ನಾರಾಯಣ ಸನಿಲ್ ರವರ
ಸ್ಮರಣಾ ಕಾರ್ಯಕ್ರಮ ಮಾ18ನೇ ಬುಧವಾರ ಸಂಘದ ಸಭಾಭವನದಲ್ಲಿ ನಡೆಯಿತು
 ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್ ವಸಂತ್ ಬೆರ್ನಾಡ್ ಪ್ರಾಸ್ತಾವಿಕವಾಗಿ ಮಾತನಾಡಿ  ದಿ. ಎಚ್ ನಾರಾಯಣ ಸನಿಲ್ ರವರು ವ್ಯಕ್ತಿಯಲ್ಲ ಶಕ್ತಿಯಾಗಿದ್ದರು,ಧಾರ್ಮಿಕ,ರಾಜಕೀಯ, ಸಹಕಾರಿ ಸಂಘದ ಭೀಷ್ಮರಾಗಿ  ಸಾಮಾಜಿಕ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು. ಅವರು ಆದರ್ಶಗಳನ್ನು ಮೈಗೂಡಿಸಿಕೊಂಡು ಸಂಸ್ಥೆಯು ಇಂದು ಬಹಳಷ್ಟು ಸಾಧನೆ ಮಾಡಿದೆ, ಸಂಸ್ಥೆಯು ಲಾಭವನ್ನು  ಉದ್ದೇಶವಾಗಿರಿಸದೆ ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಕಳಕಳಿ ಮೂಲಕ ಗ್ರಾಹಕರ ಹಾಗೂ ಸಿಬ್ಬಂದಿಗಳ ಶ್ರಮದೊಂದಿಗೆ ಸಾಧನೆ ಮಾಡಿದೆ ಎಂದರು
ಸಮಾರಂಭದ ಮುಖ್ಯ ಅತಿಥಿಗಳಾಗಿ ಜ್ಯೋತಿಷಿ
ವಿಶ್ವನಾಥ್ ಭಟ್ ಎಸ್.ಕೋಡಿ ಮಾತನಾಡಿ ದಿ.ನಾರಾಯಣ ಸನಿಲ್ ರವರು ಸಾಮಾಜಿಕ ಶೈಕ್ಷಣಿಕ ಹಾಗೂ ಸಹಕಾರಿ ಕ್ಷೇತ್ರಕ್ಕೆ ಕೊಡುಗೆ ಅಪಾರವಾಗಿದ್ದು ಅವರ ನೆರಳಿನಲ್ಲಿ ನಡೆಯುತ್ತಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಸಂಸ್ಥೆಯ ಕಾರ್ಯವೈಖರಿ ಶ್ಲಾಘನೀಯ, ಸೊಸೈಟಿ ಮತ್ತಷ್ಟು ಸಾಧನೆಗಳನ್ನು ಮಾಡಲಿ ಎಂದು ಶುಭ ಹಾರೈಸಿದರು
ಮುಖ್ಯ ಅತಿಥಿಗಳಾಗಿ ಶ್ರೀಮತಿ ಉಷಾ ವಿಶ್ವನಾಥ್ ಎಸ್ ಕೋಡಿ , ಬೇಬಿ ಚಾರ್ವಿ,
ಉದ್ಯಮಿ ಪ್ರವೀಣ್ ಕುಮಾರ್ ಬೊಳ್ಳೂರು, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ  ನಿರ್ದೇಶಕರಾದ ವಿಜಯ ಸನಿಲ್,ಧನಂಜಯ ಮಟ್ಟು,ಉಮಾನಾಥ ಜೆ ಶೆಟ್ಟಿಗಾರ್, ನವೀನ್ ಸಾಲ್ಯಾನ್, ಗಣೇಶ್ ಪ್ರಸಾದ್ ದೇವಾಡಿಗ, ಜಯ ಕೃಷ್ಣ ಕೋಟ್ಯಾನ್,ಸೊಸೈಟಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ,ಉಪಸ್ಥಿತರಿದ್ದರು 
ಸ್ವಸಹಾಯ ಸಂಘದ ಪ್ರೇರಕಿ ನೀತು ನಿರಂಜಲ ಪ್ರಾರ್ಥಿಸಿದರು.ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸ್ವಾಗತಿಸಿದರು
ಪ್ರಧಾನ ಕಛೇರಿ ಲೆಕ್ಕಿಗ ಲೋಲಾಕ್ಷಿ  ಧನ್ಯವಾದ ಅರ್ಪಿಸಿದರು,ಸಾಲ ವಿಭಾಗದ ಪ್ರಬಂಧಕಿ ಅಕ್ಷತಾ ಶೆಟ್ಟಿ ನಿರೂಪಿಸಿದರು
ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಭೀಷ್ಮ ದಿ ನಾರಾಯಣ್ ಸುನಿಲ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು