-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ಪಚ್ಚನಾಡಿ ಎಸ್ ಟಿ ಪಿ ಕಾಮಗಾರಿ, ಅವಗಣನೆಗೆ ಶಾಸಕ ಡಾ. ಭರತ್ ಶೆಟ್ಟಿ ಆಕ್ರೋಶ

ಪಚ್ಚನಾಡಿ ಎಸ್ ಟಿ ಪಿ ಕಾಮಗಾರಿ, ಅವಗಣನೆಗೆ ಶಾಸಕ ಡಾ. ಭರತ್ ಶೆಟ್ಟಿ ಆಕ್ರೋಶ



ಕಾವೂರು :  ನಗರದ  ಪಚ್ಚ ನಾಡಿ  ಎಸ್ ಟಿ ಪಿ ಬಳಿ ಒಳಚರಂಡಿ ಕಾಮಗಾರಿ, ಉನ್ನತೀಕರಣ  ಯೋಜನೆಗೆ ಹಾಗೂ ಸುರತ್ಕಲ್ ಮತ್ತು ದಕ್ಷಿಣ ಕ್ಷೇತ್ರದ ಎಸ್ ಟಿ ಪಿ ಮೇಲ್ದರ್ಜೆ ಚಾಲನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬುಧವಾರ ನೀಡಿದ್ದು, ಸ್ಥಳೀಯ ಶಾಸಕನಾಗಿ ಆಹ್ವಾನ ನೀಡದೆ ಇರುವುದಕ್ಕೆ ಶಾಸಕ ಡಾ. ಭರತ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೇಂದ್ರದ ಸ್ವಚ್ಛ ಭಾರತ್ ಹಾಗೂ  ಎನ್ ಜಿ ಟಿ ಅನುದಾನ 
40 ಕೋಟಿ ಅನುದಾನ ಬಂದಿದೆ. ರಾಜ್ಯ ಸರಕಾರದ ಪಾತ್ರ ಕೇವಲ ಅನುಷ್ಠಾನ ಮಾತ್ರ.ಒಳಚರಂಡಿ ಯೋಜನೆಗೆ ನನ್ನ ಪ್ರಥಮ ಅವಧಿಯಲ್ಲಿ  ಕಾಮಗಾರಿಗೆ ಸಂಬಂಧಿಸಿದಂತೆ  ಪತ್ರ ಬರೆದು  ಅನುದಾನ ತರಲು ಕ್ರಮ ವಹಿಸಲಾಗಿತ್ತು ಎಂದಿದ್ದಾರೆ.ಸಚಿವ ಗುಂಡೂರಾವ್ ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ಬರುವುದೇ ಅಪರೂಪ.ಇದರ ನಡುವೆ ಸರ್ಕಾರದ ಸಭೆ, ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕ್ರಮ ಎಂಬಂತೆ  ಬಿಂಬಿಸಿ ಹೋಗುತ್ತಾರೆ.ಸ್ಥಳೀಯ ಶಾಸಕನ್ನಾಗಿ ಪಚ್ಚನಾಡಿಯಲ್ಲಿ ನನ್ನ ಉಪಸ್ಥಿಯಲ್ಲಿ ನಡೆಯಬೇಕಿತ್ತು.
ಸ್ಥಳೀಯ ಕಾಂಗ್ರೆಸ್  ನಾಯಕರ ಕುಮ್ಮಕ್ಕುನಿಂದ ಅಧಿಕಾರಿಗಳು ಕೂಡ ಮಾಹಿತಿ ನೀಡಿಲ್ಲ.
ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಪ್ರಾಬಲ್ಯ ಹಾಗೂ ಉತ್ತಮ ಕೆಲಸ ಕಾರ್ಯ ವನ್ನು ಕಾಂಗ್ರೆಸ್ ಗೆ ಸಹಿಸಿ ಕೊಳ್ಳ ಲಾಗುತ್ತಿಲ್ಲ.ಇದೀಗ ತಮ್ಮದೇ ಸಾಧನೆ ಎಂಬಂತೆ ಕ್ರೆಡಿಟ್ ಪಡೆಯಲು ಹವಣಿಸುತ್ತಿದೆ ಎಂದು ವ್ಯಂಗ್ಯ ವಾಡಿದರು. 
ಸಂಬಂಧ ಪಟ್ಟವರ ಮೇಲೆ ಹಕ್ಕು ಚ್ಯುತಿ ಮಂಡನೆ ಮಾಡುವೆ ಎಂದು ಹೇಳಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ