Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕುಡಿಯುವ ನೀರಿನ ಸಮಸ್ಯೆ ಸಾಧ್ಯತೆ,ಸ್ಥಳಕ್ಕೆ ಶಾಸಕ ಡಾ.ವೈ ಭರತ್ ಶೆಟ್ಟಿ ಭೇಟಿ,ಸ್ಥಳ ಪರೀಶೀಲನೆ

ಮಂಗಳೂರು ಮಹಾ ನಗರ ಪಾಲಿಕೆಯ 2 ನೇ ವಾರ್ಡ್ ವ್ಯಾಪ್ತಿಗೆ ಒಳಪಟ್ಟ ಮದ್ಯ ಅಂಬೇಡ್ಕರ್ ಕಾಲನಿಯಲ್ಲಿರುವ ಸಾರ್ವಜನಿಕರ ಕುಡಿಯುವ ನೀರಿನ ಬಾವಿ ಬತ್ತಿ ಹೋಗಿದ್ದು,  ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ  ಶಾಸಕ ಡಾ. ವೈ ಭರತ್ ಶೆಟ್ಟಿಯವರು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭ, ಸ್ಥಳೀಯರ ಬಹು ಬೇಡಿಕೆಯಂತೆ ಶೀಘ್ರವಾಗಿ ಕುಡಿಯುವ ನೀರಿನ ಬಾವಿಯ ಹೆಚ್ಚುವರಿ ಕಾಮಗಾರಿಯನ್ನು ನಡೆಸಿ ಹೂಳೆತ್ತಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.