ಮಂಗಳೂರು - ಮೂಡುಜೆಪ್ಪು ನಡುವಿನ ಸರಕಾರಿ ನಗರ ಸಾರಿಗೆ ಬಸ್ಸಿನ ಸಂಚಾರಕ್ಕೆ ಹಸಿರು ನಿಶಾನೆ
Thursday, March 5, 2026
ಮಂಗಳೂರು:ಮಂಗಳೂರು ಬಸ್ ನಿಲ್ದಾಣದಲ್ಲಿ ನೂತನ ಮಂಗಳೂರು - ಮೂಡುಜೆಪ್ಪು ನಡುವಿನ ಸರಕಾರಿ ನಗರ ಸಾರಿಗೆ ಬಸ್ಸಿನ ಸಂಚಾರಕ್ಕೆ ಹಸಿರು ನಿಶಾನೆ ತೋರುವ ಮೂಲಕ ಶಾಸಕ ಡಾ.ಭರತ್ ಶೆಟ್ಟಿ ಅವರು ಚಾಲನೆ ನೀಡಿದರು.
ಈ ಬಸ್ಸು ಮಂಗಳೂರು ಬಸ್ಸು ನಿಲ್ದಾಣದಿಂದ 07:05, 09:00, 11:15, 13:30, 15:10, 17:00 ಗಂಟೆಗೆ ಮಲ್ಲಿಕಟ್ಟೆ, ನಂತೂರು, ಕುಡುಪು, ವಾಮಂಜೂರು,ಉಳಾಯಿಬೆಟ್ಟು ಮಾರ್ಗವಾಗಿ ಮೂಡುಜೆಪ್ಪುವಿಗೆ ಹಾಗೂ ಮರು ಪ್ರಯಾಣದಲ್ಲಿ ಮೂಡುಜೆಪ್ಪುವಿನಿಂದ ಮಂಗಳೂರಿಗೆ 08:00, 10:00, 12:15, 14:20, 16:00, 18:00 ಗಂಟೆಗೆ ಸಾರ್ವಜನಿಕರ ಸೇವೆಗೆ ಕಾರ್ಯಾಚರಣೆಯಾಗಲಿದೆ.