Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಅದ್ಯಪಾಡಿ ಶಾಲೆಯಲ್ಲಿ 'ಮಕ್ಕಳ ಸಂತೆ' ಕಾರ್ಯಕ್ರಮ

ಬಜಪೆ:ಶಾಲಾ ಹಳೆ ವಿದ್ಯಾರ್ಥಿ ಸಂಘ ,ಎಸ್ ಡಿ ಎಂ ಸಿ, ಶಿಕ್ಷಕರು ಹಾಗೂ ಪೊಷಕರ ಸಹಕಾರದಲ್ಲಿ ಮಕ್ಕಳ ಸಂತೆ ಎಂಬ ವಿಶೇಷ ಕಾರ್ಯಕ್ರಮವು  ಮಂಗಳೂರು ತಾಲೂಕಿನ ಬಜಪೆ ಸಮೀಪದ  ಅದ್ಯಪಾಡಿಯ ದ.ಕ ಜಿ.ಪಂ ಹಿ.ಪ್ರಾ ಶಾಲೆ ಯಲ್ಲಿ ನಡೆಯಿತು.
  ಮಕ್ಕಳು ಮಾರಾಟ ಕೌಶಲ್ಯ,ವ್ಯವಹಾರ ಜ್ಞಾನ ದ ಬಗ್ಗೆ  ತಿಳಿದುಕೊಳ್ಳುವ ನಿಟ್ಟಿನಲ್ಲಿ  ಮಕ್ಕಳ ಸಂತೆ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
 ಶಾಲೆಯಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಮಕ್ಕಳು ಮನೆಯಲ್ಲಿ ಬೆಳೆದ ತರಕಾರಿ ,ಸೊಪ್ಪು,ಹಣ್ಣುಗಳು,ಮಾವಿನಕಾಯಿ ಇವುಗಳನ್ನು ಮಾರಾಟ ಮಾಡಿದರು.ಅದರೊಂದಿಗೆ ಕಲ್ಲಂಗಡಿ ಹಾಗೂ ವಿವಿಧ ಚಾಟ್ ಮಸಾಲಗಳು,ಪಾನೀಯಗಳು,ಪಾನಿಪುರಿ ಹೀಗೆ ವಿವಿಧ ಬಗೆಯ ತಿನಿಸುಗಳನ್ನೂ  ಮಾರಾಟ ಮಾಡಿದರು.ಪೊಷಕರು,ಶಿಕ್ಷಕರು ಗ್ರಾಹಕರಾಗಿ ಬಂದು ತರಕಾರಿ ಹಾಗೂ ವಿವಿಧ ಬಗೆಯ ತಿನಿಸುಗಳನ್ನು ಖರೀದಿ ಮಾಡಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ವೃಂದಾವತಿ ಎಂ,ಶಾಲಾ ಎಸ್.ಡಿ .ಎಂ ಸಿ ಅಧ್ಯಕ್ಷ ದೇವಿಪ್ರಸಾದ್,ಹಳೆ ವಿದ್ಯಾರ್ಥಿ ಸಂಘದ ಹಮೀದ್,ಶಾಲಾಎಸ್ ಡಿಎಂ ಸಿ ಸದಸ್ಯರುಗಳು,ಶಾಲಾ ಶಿಕ್ಷಕವೃಂದ ಹಾಗೂ ಪೊಷಕರು ಉಪಸ್ಥಿತರಿದ್ದರು.