Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸರ್ಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನ ಮೌಲ್ಯ ಆರ್ ಶೆಟ್ಟಿ ರಾಷ್ಟ್ರಮಟ್ಟದ ನೆಟ್ ಬಾಲ್ ತಂಡಕ್ಕೆ ಆಯ್ಕೆ

ಬಜಪೆ:ನೆಟ್ ಬಾಲ್ ಫೆಡರೇಷನ್ ಆಫ್ ಇಂಡಿಯಾ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಕರ್ನಾಟಕ ಅಧೀನಕ್ಕೊಳಪಟ್ಟ ಅಮೆಚೂರ್ ನೆಟ್ ಬಾಲ್ ಎಸೋಸಿಯೇಷನ್ ಆಫ್ ಕರ್ನಾಟಕ ಇವರು ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಮಂಗಳೂರು ಉತ್ತರ ಇಲ್ಲಿನ 9ನೇ ತರಗತಿ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ಕು. ಮೌಲ್ಯ ಆರ್ ಶೆಟ್ಟಿ 2ನೇ ಜೂನಿಯರ್ ಮಿಕ್ಸ್ಡ್ ನ್ಯಾಷನಲ್ ನೆಟ್‌ಬಾಲ್ ಚಾಂಪಿಯನ್‌ಶಿಪ್ 2025-26 ಗೆ  ಆಯ್ಕೆಯಾಗಿದ್ದಾರೆ. ಈ ಚಾಂಪಿಯನ್‌ಶಿಪ್  ಮಾ.29  ರಿಂದ ಮಾ. 31  ರವರೆಗೆ ಉತ್ತರ ಪ್ರದೇಶದ ಶ್ರೀ ಪ್ಯಾರೆಜಿ ಮಹಾರಾಜ್ ಸ್ಪೋರ್ಟ್ಸ್ ಅಕಾಡೆಮಿ  ಜೌಲಾದಲ್ಲಿ ನಡೆಯಲಿದೆ.   ಈ ಬಗ್ಗೆ ಬೆಂಗಳೂರು ರಾಜಾಜಿನಗರದ  ವಿವೇಕಾನಂದ ಕಾಲೇಜಿನಲ್ಲಿ ಮಾ.   25  ರಿಂದ ವಿಶೇಷ ತರಬೇತಿ ನಡೆಯಲಿದೆ.
ವಿದ್ಯಾರ್ಥಿನಿ ಕು.ಮೌಲ್ಯ ಅರ್ .ಶೆಟ್ಟಿಯವರಿಗೆ ದೈಹಿಕ ಶಿಕ್ಷಣ ಶಿಕ್ಷಕಿ   ಶ್ರೀಮತಿ ವಿದ್ಯಾಲತಾ ಇವರು ತರಬೇತಿಯನ್ನು ನೀಡಿರುತ್ತಾರೆ.