Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮಾ.7- 8:ಶ್ರೀ ಕೊರ್ದಬ್ಬು ದೈವಸ್ಥಾನ (ರಿ) ಅತ್ತೂರು ಮಾಗಣೆ, ಶ್ರೀ ಕೊರ್ದಬ್ಬು ತನ್ನಿಮಾನಿಗ ಹಾಗೂ ಧೂಮಾವತಿ ಬಂಟ ದೈವಗಳ ವಾರ್ಷಿಕ‌ ನೇಮೋತ್ಸವ

ಕಿನ್ನಿಗೋಳಿ:ಶ್ರೀ ಕೊರ್ದಬ್ಬು ದೈವಸ್ಥಾನ (ರಿ) ಅತ್ತೂರು ಮಾಗಣೆ ಇಲ್ಲಿನ ಶ್ರೀ ಕೊರ್ದಬ್ಬು ತನ್ನಿಮಾನಿಗ ಹಾಗೂ ಧೂಮಾವತಿ ಬಂಟ ದೈವಗಳ ವಾರ್ಷಿಕ‌ ನೇಮೋತ್ಸವವು   ಮಾ. 7 ಮತ್ತು ಮಾ. 8 ರಂದು ನಡೆಯಲಿದೆ. ಮಾ 7 ರಂದು ಸಂಜೆ 8  ಗಂಟೆಗೆ ಭಂಡಾರ ಸ್ಥಾನದಿಂದ ಶ್ರೀ ಕೊರ್ದಬ್ಬು‌ ಮತ್ತು ಶ್ರೀ ಧೂಮಾವತಿ ಬಂಟ ದೈವಗಳ ಭಂಡಾರ ಹೊರಟು, ಕೊಡಿಯಡಿಯಲ್ಲಿ ಭಂಡಾರ ನೆಲೆಯಾಗುವುದು, ನಂತರ ಅನ್ನಸಂತರ್ಪಣೆ, ರಾತ್ರಿ‌10  ಗಂಟೆಗೆ, ಕೊರ್ದಬ್ಬು ದೈವದ ಗಗ್ಗರ ಸೇವೆ, ರಾತ್ರಿ‌ 2  ಗಂಟೆಗೆ ತನ್ನಿಮಾನಿಗ ದೈವದ ಗಗ್ಗರ ಸೇವೆ,  ಮಾ. 8 ರಂದು  ಬೆಳಿಗ್ಗೆ 9  ಗಂಟೆಗೆ ಧೂಮಾವತಿ ಬಂಟ ದೈವದ ನೇಮ, ಶ್ರೀ ದೈವದ  ಗಡುವಿನಲ್ಲಿ ಅತ್ತೂರು ಮಾಗಣೆಯವರ ಕೋಳಿ ಹರಕೆ, ನಂತರ ಭಂಡಾರ ನಿರ್ಗಮಿಸಲಿದೆ. ಮಾ. 7 ರಂದು ಸಂಜೆ ಭಂಡಾರಮನೆ  ಲೀಲಾ ಪೂವಪ್ಪ ಶೆಟ್ಟಿಯವರ ನಿರ್ಮಾಣದ ನೂತನ ಸ್ವಾಗತ ಗೋಪುರ, ಕೆಮ್ರಾಲ್ ಪಂಚಾಯತ್ ವತಿಯಿಂದ ನಿರ್ಮಾಣಗೊಂಡ ನೂತನ ಶೌಚಾಲಯದ ಉದ್ಘಾಟನೆಯಾಗಲಿದೆ ಎಂದು ಅನುವಂಶಿಕ ಆಡಳಿತ ಮೊಕ್ತೇಸರ ಅತ್ತೂರುಗುತ್ತು ಬಾಡ ಎಸ್ ಶೆಟ್ಟಿ, ದೈವಸ್ಥಾನದ  ಅಧ್ಯಕ್ಷ ಗಂಗಾಧರ ಶೆಟ್ಟಿ ಮೂಡ್ರಗುತ್ತು ತಿಳಿಸಿದ್ದಾರೆ.