ಫೆ. 11ರಿಂದ 16ರ ತನಕ ಏಳಿಂಜೆ ಜಾತ್ರೆ
ಕಿನ್ನಿಗೋಳಿ: ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ಮಹಾಗಣಪತಿ ದೇವಸ್ಥಾದಲ್ಲಿ ವರ್ಷಾವಧಿ ಉತ್ಸವ ಹಾಗೂ 108 ಯಾಗ ಕುಂಡಗಳಲ್ಲಿ ಏಕಕಾಲದಲ್ಲಿ ವಿಷ್ಣುಸಹಸ್ರನಾಮ ಯಾಗ ಫೆ. 11ರಿಂದ 16 ರತನಕ ನಡೆಯಲಿದೆ. ಫೆ. 11 ರಂದು ಬಾಲಗಣಪತಿ ಹೋಮ, ಸಂಜೆ ಬಲಿ ಉತ್ಸವ, ರಂಗಪೂಜೆ. ಫೆ. 12 ರಂದು 108 ಕಾಯಿ ಗಣಯಾಗ, ದೇವರ ಬಲಿ ಉತ್ಸವ, ಧ್ವಜಾರೋಹಣ. ಸಂಜೆ ಪರಿವಾರ ದೈವಗಳ ಸನ್ನಿಧಿಯಲ್ಲಿ ನವಕಾಭಿಷೇಕ ಮತ್ತು ಪೂಜೆ ಫೆ. 13ರಂದು ಬೆಳಗ್ಗೆ ಶ್ರೀ ದೇವರ ಸನ್ನಿಧಿಯಲ್ಲಿ ಲಕ್ಷ ತುಳಸಿ ಆರ್ಚನೆ, ಸಂಜೆ ಬಲಿ ಉತ್ಸವ ದೇವರ ಸವಾರಿ ಕಟ್ಟೆಪೂಜೆ. ಫೆ. 14ರಂದು ಬೆಳಗ್ಗೆ ಬಾಲಗಣಪತಿ ಹೋಮ, 108 ತೆಂಗಿನ ಕಾಯಿ ಗಣ ಹೋಮ, 108 ಕುಂಡದಲ್ಲಿ ಏಕಕಾಲದಲ್ಲಿ ವಿಷ್ಣು ಸಹಸ್ರನಾಮ ಯಾಗ ನಡೆಯಲಿದೆ. ಫೆ. 15 ರಂದು ಕವಾಟೋದ್ಘಾಟನೆ, ತುಲಭಾರ ಸೇವೆ, ಆಶ್ಲೇಷಾ ಬಲಿ, ಜಾರಂದಾಯ ಬಂಟ ಮತ್ತು ಕೋಡ್ದಬ್ಬು ದೈವಗಳ ಭಂಡಾರ ಬರುವುದು, ಉತ್ಸವ ಬಲಿ, ಬ್ರಹ್ಮರಥೋತ್ಸವ ದೈವಗಳ ನೇಮ, ಅವಭೃಥ ಸ್ನಾನ, ಧ್ವಜಾವರೋಹಣ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಏಳಿಂಜೆ ಕೋಂಜಾಲುಗುತ್ತು ಪ್ರಭಾಕರ ಶೆಟ್ಟಿಹಾಗೂ ಅನುವಂಶಿಕ ಅರ್ಚಕ ವೈ. ವಿ. ಗಣೇಶ್ ಭಟ್ ತಿಳಿಸಿದ್ದಾರೆ.