Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎಕ್ಕಾರು ಅರಸುಲಪದವು ಗುಡ್ಡಕ್ಕೆ ಬೆಂಕಿ

ಬಜಪೆ:ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಕ್ಕಾರು ಅರಸುಲಪದವು ಗುಡ್ಡಕ್ಕೆ ಬೆಂಕಿ ತಗುಲಿದ ಘಟನೆ ನಡೆದಿದೆ.ಅರಸುಲಪದವಿನ ಗುಡ್ಡದ ಹೆಚ್ಚಿನ ಭಾಗಕ್ಕೆ ಬೆಂಕಿ ಆವರಿಸಿಕೊಂಡಿತ್ತು.ಕೂಡಲೇ ಎಚ್ಚೆತ್ತ ಸ್ಥಳೀಯ ಗ್ರಾಮಸ್ಥರು ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ್ದರು.ಗುಡ್ಡವಿಡಿ ಆವರಿಸಿಕೊಂಡಿರುವ ಬೆಂಕಿಯನ್ನು ನಂದಿಸಲು ಹರಸಾಹಸಪಡುವಂತಾಯಿತು.ಘಟನಾ ಸ್ಥಳಕ್ಕೆ ಕದ್ರಿ ಹಾಗೂ ಎಸ್ ಇ ಝಡ್  ನ ಅಗ್ನಿ ಶಾಮಕ ದಳಗಳು ಆಗಮಿಸಿ ಬೆಂಕಿಯನ್ನು ನಂದಿಸಿದರು.ಅರಸುಲಪದವು ಗುಡ್ಡಕ್ಕೆ ಈ ಹಿಂದೆಯೂ ಹಲವು ಬಾರಿ ಬೆಂಕಿ ತಗುಲಿದ ಘಟನೆಗಳು ನಡೆದಿದೆ