Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಹಿಂದೂ ಧರ್ಮ ಶ್ರೇಷ್ಠ ಧರ್ಮ - ವೇ.ಕಮಲಾದೇವಿ ಆಸ್ರಣ್ಣ

ಬಜಪೆ :ಭಾರತೀಯರಲ್ಲಿ ವಿಶೇಷವಾದ ಅರಾಧನಾ ಪದ್ದತಿ ಇದೆ.ಹಿಂದುತ್ವ ಎಂಬುದು ಎಲ್ಲಾ ಧರ್ಮಗಳಿಂದಲೂ ಶ್ರೇಷ್ಠವಾಗಿದ್ದು,ರಾಷ್ಟ್ರೀಯತೆ ಬೆಳೆಸುದರ ಜೊತೆಗೆ  ಹಿಂದೂ ಧರ್ಮವನ್ನು  ಗಟ್ಟಿಗೊಳಿಸಬೇಕು ಎಂದು ಕಟೀಲು ದೇವಳದ ಅನುವಂಶಿಕ ಅರ್ಚಕ ವೇದಮೂರ್ತಿ ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದರು.ಅವರು  ಭಾನುವಾರದಂದು  ಹಿಂದೂ ಸಂಗಮ  ಆಯೋಜನ ಸಮಿತಿ  ಗುರುಪುರ ತಾಲೂಕು ,ತೆಂಕ ಎಕ್ಕಾರು ,ಬಡಗ ಎಕ್ಕಾರು ಹಾಗೂ  ಪೆರ್ಮುದೆ  ಗ್ರಾಮಗಳನ್ನು ಒಳಗೊಂಡ ಎಕ್ಕಾರು  ಮಂಡಲದ ವತಿಯಿಂದ  ಎಕ್ಕಾರು ಬಂಟರ ಭವನದ ವಠಾರದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಎಕ್ಕಾರು ಬಂಟರ ಸಂಘದ ಅಧ್ಯಕ್ಷ  ರತ್ನಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಗೋಪೂಜೆ ನಡೆಸಿ ಬಳಿಕ ಭಾರತಾಂಬೆಗೆ   ದೀಪ ಬೆಳಗಿಸಿ ಪುಷ್ಪಾರ್ಚಣೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ವಕೀಲೆ ವಿದ್ಯಾಮಲ್ಯ   ಅವರು ದಿಕ್ಸೂಚಿ ಭಾಷಣಗೈದರು. ಸುಜಿತ್ ಕಲ್ಲಡ್ಕ ಅವರು ಹಿಂದೂ ಸಂಗಮದ ಬಗ್ಗೆ ಬೌದ್ದಿಕ್ ಉಪನ್ಯಾಸ ನೀಡಿದರು.     


ಈ ಸಂದರ್ಭ ಹಿಂದೂ ಸಂಗಮ         ಆಯೋಜನಾ ಸಮಿತಿ  ಗುರುಪುರ ತಾಲೂಕು  ಅಧ್ಯಕ್ಷ ಚಂದ್ರಹಾಸ ಶೆಟ್ಟಿ ನಾರಳ,ಎಕ್ಕಾರು ಮಂಡಲದ ಅಧ್ಯಕ್ಷ ಪ್ರವೀಣ್ ಆಚಾರ್ಯ,ಸಂತೋಷ್ ಶೆಟ್ಟಿ ಮಿತ್ತೋಟ್ಟು ಬಾಳಿಕೆ,ಯಾದವ ಕೋಟ್ಯಾನ್ ,ಸದಾಶಿವ ಶೆಟ್ಟಿ,ಪ್ರಕಾಶ್ ಕುಕ್ಯಾನ್,ರಾಮ ಗೌಡ,ಉದಯ ಪ್ರಕಾಶ್ ನಾಯಕ್ ,ಜಗದೀಶ ರಾವ್,ರಾಮ ಶೆಟ್ಟಿಗಾರ್,ನಾಗೇಶ್ ಆಚಾರ್ಯ,ಪ್ರವೀಣ್,ರತ್ನಾಕರ,ಸದಾಶಿವ ಮಡಿವಾಳ,ಸದಾನಂದ ಬೆಲ್ಚಡ,ಸೀತಾರಾಮ,ಸದಾಶಿವ ಶೆಟ್ಟಿಗಾರ್,ಭಾಸ್ಕರ ಭಂಡಾರಿ ಹಾಗೂ ಮೊದಲಾದವರು ಇದ್ದರು.


ಕಾರ್ಯಕ್ರಮದ ಆರಂಭಕ್ಕೂ ಮೊದಲು ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ದ್ವಾರದ ಬಳಿಯಿಂದ  ಎಕ್ಕಾರು ಬಂಟರ ಭವನದ ತನಕ ಭವ್ಯ ಶೋಭಾಯಾತ್ರೆಯು ನಡೆಯಿತು.