-->

ಇಂದು ಸಸಿಹಿತ್ಲುವಿನ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ಕ್ಷೇತ್ರದಲ್ಲಿ ದೈವಗಳ ನೇಮೊತ್ಸವ

ಇಂದು ಸಸಿಹಿತ್ಲುವಿನ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ಕ್ಷೇತ್ರದಲ್ಲಿ ದೈವಗಳ ನೇಮೊತ್ಸವ

ಹಳೆಯಂಗಡಿ:ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘದ ಸಂಚಾಲಕತ್ವಗೊಳಪಟ್ಟ ಸಸಿಹಿತ್ಲುವಿನ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಇಂದು ಬೆಳಿಗ್ಗೆ ಉಳ್ಳಾಯ ದೈವದ ನೇಮೋತ್ಸವ,ಇಷ್ಟದೇವತೆ,ಮೂಲಮಹಿಷಂದಾಯ,ಬಬ್ಬರ್ಯ ಹಾಗೂ ಪರಿವಾರ ದೈವಗಳ ನೇಮ ಮತ್ತು ಕಾಂತಾಬಾರೆ ಬೂದಾಬಾರೆಯರಿಗೆ ,ಮಾಯಂದಾಲ್ ಗೆ ಪಂಚಕಜ್ಜಾಯ ಸೇವೆ ಹಾಗೂ ಮಧ್ಯಾಹ್ನ ಮಹಾ ಅನ್ನಸಂತರ್ಪಣೆಯು ನಡೆಯಲಿದೆ.ಮಧ್ಯಾಹ್ನ 1 ರಿಂದ  ಪದ್ಮನಾಭ ಸಸಿಹಿತ್ಲು ನೇತೃತ್ವದ ಕಲಾ ಸೌರಭ ಮುಂಬಾಯಿ  ತಂಡದವರಿಂದ ಗೀತಾ ಗಾನಾಮೃತ ಸಂಗೀತ ಕಾರ್ಯಕ್ರಮ,ಸಂಜೆ 3:30ರಿಂದ ಓಡ್ಯಂತಾಯ ದೈವದ ನೇಮೋತ್ಸವ ,ರಾತ್ರಿ 9 ರಿಂದ ಜಾರಂದಾಯ ಬಂಟ,ಧೂಮಾವತಿ ಬಂಟ,ಕೊಡಮಣಿತ್ತಾಯ ,ಖಂಡಿಗೆ ಬೀಡಿನ ಕಾಂತೇರಿ ಧೂಮಾವತಿ ,ಪಿಲಿಚಾಮುಂಡಿ ದೈವಗಳ ನೇಮೋತ್ಸವವು ನಡೆಯಲಿದೆ.ನಾಳೆ(ಫೆ.10)ಬೆಳಿಗ್ಗೆ 5 ರಿಂದ ಧ್ವಜಾವರೋಹಣ ,ಕಾಂತು ಲಕಣರ ಗುರಿಕಾರರ ಮನೆಗೆ  ಹಾಗೂ ಖಂಡಿಗೆ ಬೀಡಿಗೆ ಭಂಡಾರ ನಿರ್ಗಮನವಾಗಲಿದೆ.

ಶ್ರೀ ಓಡ್ಯಂತಾಯ ದೈವಕ್ಕೆ ಸಮರ್ಪಣೆಯಾದ ಬೆಳ್ಳಿಯ ಗಗ್ಗರ 

ಶ್ರೀ ಕ್ಷೇತ್ರಕ್ಕೆ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಭೇಟಿ ನೀಡಿ ದೈವಗಳ ಅನುಗ್ರಹ ಪ್ರಸಾದ ಪಡೆದರು.


ಸಸಿಹಿತ್ಲು ಶ್ರೀ ಸಾರಂತಾಯ ಗರೊಡಿಯ ಕಾಂತಾಬಾರೆ ಬೂದಾಬಾರೆ ಗುಡಿಯನ್ನು ಕಾಂತುಲಕಣ ಗಡಿಪ್ರದಾನರು ಪಠೇಲ ಮನೆತನದ   ತಿಲೋತ್ತಮ ಮತ್ತು ಪರಿವಾರದವರು ಉದ್ಘಾಟಿಸಿದರು.


ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನವನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿ.ಬಿ.ಕರ್ಕೇರ ಮತ್ತು ಮೋಹಿತಾಕ್ಷಿ ದಂಪತಿ ಗಳು ಉದ್ಘಾಟಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ