ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ, ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ
ಹಳೆಯಂಗಡಿ : ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನದಲ್ಲಿ ಮಾ. 4 ರಿಂದ ಮಾ.8 ರ ತನಕ ಬ್ರಹ್ಮಕಲಶೋತ್ಸವವು ನಡೆಯಲಿದ್ದು,ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಶುಕ್ರವಾರದಂದು ತಂತ್ರಿಗಳಾದ ಶ್ರೀಪತಿ ಭಟ್, ದೇವಳದ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೇ ಅಪ್ಪು ಪೂಜಾರಿ ಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಪ್ಪರ ಮುಹೂರ್ತವು ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿ ರಮೇಶ್ ಬಂಗೇರ, ಚಪ್ಪರ ಸಮಿತಿಯ ಅಧ್ಯಕ್ಷ ಪ್ರೇಮನಾಥ ಸುವರ್ಣ, ಅಭಿವೃದ್ದಿ ಸಮಿತಿಯ ಅಧ್ಯಕ್ಷ ಪ್ರಭಾಕರ ಪೂಜಾರಿ, ವಿವಿಧ ಸಮಿತಿಗಳ ಸುಧಾಕರ ಸುವರ್ಣ, ಶೋಭೇಂದ್ರ ಸಸಿಹಿತ್ಲು,ಚಂದ್ರಶೇಖರ ನಾನಿಲ್, ಗೀತಾ ಕುಮಾರ್, ಲೀಲಾಧರ ಬಂಗೇರ, ಕಸ್ತೂರಿ ಪಂಜ, ಜಗನ್ನಾಥ ಕೋಟ್ಯಾನ್, ಉದಯಕುಮಾರ್, ವಿನೋದ್ ಕುಮಾರ್ ಬೊಳ್ಳೂರು, ಅಶೋಕ್ ಬಂಗೇರ, ಅರವಿಂದ್, ವಿ.ಕೆ.ಯಾದವ್, ಎಸ್.ಆರ್ ಪ್ರದೀಪ್, ಕಿರಣ್ ಗುರಿಕಾರ, ಸುಧಾನಂದ ಬೆಳ್ಳಡ,ಸುರೇಶ್ ಬಂಗೇರ ಸಸಿಹಿತ್ಲು,ರಾಜೇಂದ್ರ ಪ್ರಸಾದ್, ಮೋಹನ್ ಸುವರ್ಣ, ಅಶೀಶ್ ಬಂಗೇರ, ಉಮೇಶ್ ಅಮೀನ್, ಮನೋಜ್ ಕರ್ಕೇರ, ಸತೀಶ್ ಶೆಟ್ಟಿ ಎಕ್ಕಾರು ಹಾಗೂ ಮೊದಲಾದವರು ಉಪಸ್ಥಿತರಿದ್ದರು.