ಸಸಿಹಿತ್ಲು: ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ
Monday, February 9, 2026
ಹಿತವರ್ಧಕ ಸಂಘದ ಸಂಚಾಲಕತ್ವ ಕ್ಕೊಳಪಟ್ಟಿರುವ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಶ್ರೀ ಧರ್ಮರಸು ಪರಿವಾರ ದೈವಗಳ, ಕಾಂತಬಾರೆ ಬೂದಬಾರೆ ಮತ್ತು ಮಾಯಂದಾಲ್ ಶಕ್ತಿಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಭಾನುವಾರ ಬೆಳಿಗ್ಗೆ 8:30ರ ಕುಂಭ ಲಗ್ನ ಸುಮುಹೂರ್ತದಲ್ಲಿ ವೇದಮೂರ್ತಿ ರಂಗನಾಥ ಭಟ್ ನೇತೃತ್ವದಲ್ಲಿ ನಡೆಯಿತು
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಪ್ರಾತಃಕಾಲ 6ಕ್ಕೆ ಸ್ವಸ್ತಿ ಪುಣ್ಯಾಹ ಗಣ ಹೋಮ ಪ್ರತಿಷ್ಠಾ ಹೋಮ, ಶಕ್ತಿ ಪಂಚಾಕ್ಷರಿ ಹೋಮ, ಸಾಮೂಹಿಕ ಪ್ರಾರ್ಥನೆ ಶಿಖರ ಪ್ರತಿಷ್ಠೆ ನಡೆಯಿತು
ಪೂರ್ವಾಹ್ನ 8:30ರ ಕುಂಭ ಲಗ್ನ ಮುಹೂರ್ತದಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಕೊಡಿಯಡಿ ಏರುವುದು, ದೈವ ದರ್ಶನ, ಧ್ವಜಾರೋಹಣ, ಭಂಡಾರವನ್ನು ಕೊಡಿಯಡಿಗೆ ತರುವುದು ಪ್ರಸಾದ ವಿತರಣೆ ಪಲ್ಲಪೂಜೆ, ಬ್ರಹ್ಮಕಲಶೋತ್ಸವ ಬ್ರಹ್ಮತೀರ್ಥ ವಿತರಣೆ
ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು
ಈ ಸಂದರ್ಭ
ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ ಆಡಳಿತ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು
ಫೆ.8ಸಂಜೆ 6ರಿಂದ ಸಮಾರೋಪ ಸಭಾ ಕಾರ್ಯಕ್ರಮ, ಸ್ಮರಣ ಸಂಚಿಕೆ
ಬಿಡುಗಡೆ, ಫೆ. 9ರಂದು ಬೆಳಗ್ಗೆ 5ರಿಂದ ಶ್ರೀ ಉಳ್ಳಾಯ ಪರಿವಾರ ದೈವಗಳ ನೇಮೋ ತ್ಸವ, 12.30ರಿಂದ ಮಹಾ ಅನ್ನಸಂತರ್ಪಣೆ, 1ರಿಂದ ಗೀತಾ ಗಾನಾಮೃತ, ಸಂಜೆ 3.30ರಿಂದ ಓಡ್ಕಂತಾಯ ದೈವದ ನೇಮೋತ್ಸವ, ರಾತ್ರಿ 9ರಿಂದ ಜಾರಂದಾಯ ಬಂಟ, ಪರಿವಾರ ದೈವಗಳ ನೇಮೋತ್ಸವ, ಫೆ. 10ರಂದು ಧ್ವಜಾವರೋಹಣ, ಕಾಂತು ಲಕ್ಕಣ ಗುರಿಕಾರರ ಮನೆಗೆ ಭಂಡಾರ ನಿರ್ಗಮನ ನಡೆಯಲಿದೆ