Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮಾ.4 - 8 ಸಸಿಹಿತ್ಲು ಬ್ರಹ್ಮಕಲಶ,ಸಮಿತಿಗಳ ಸಮಾಲೋಚನಾ ಸಭೆ

ಹಳೆಯಂಗಡಿ:ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನದಲ್ಲಿ ಮಾ.4 ರಿಂದ ಮಾ.8 ರವರೆಗೆ ಬ್ರಹ್ಮಕಲಶೋತ್ಸವವು ನಡೆಯಲಿದ್ದು,ಆಪ್ರಯುಕ್ತ ವಿವಿಧ ಸಮಿತಿ ಹಾಗೂ ಉಪಸಮಿತಿಗಳ ಸಮಲೋಚನಾ ಸಭೆಯು ದಿವ್ಯಾಮೃತ ಭೋಜನ ಮಂದಿರದಲ್ಲಿ ಭಾನುವಾರದಂದು ನಡೆಯಿತು.ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು  ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಸ್ವಾಗತ ಸಮಿತಿಯ ಉಪಾಧ್ಯಕ್ಷ  ಗಣೇಶ್ ಹೊಸಬೆಟ್ಟು,ವೈದಿಕ ಸಮಿತಿಯ ಭೋಜ ಗುರಿಕಾರ,ಅತಿಥಿ ಸತ್ಕಾರ ಸಮಿತಿಯ ದಿವಾಕರ ಸಾಮಾನಿ,ಸ್ವಯಂ ಸೇವಕ ಸಮಿತಿಯ ವಿನೊದ್  ಬೆಳ್ಳಾಯಾರು,ಮಾತೃ ಮಂಡಳಿಯ ಕಸ್ತೂರಿ ಪಂಜ,ಉಗ್ರಾಣ ಸಮಿತಿಯ ವಿನಯಾನಂದ ಶೆಟ್ಟಿಗಾರ್,ಮೋಹನ್ ಶೆಟ್ಟಿಗಾರ್,ಸ್ವಾಗತ ಸಮಿತಿಯ ನವೀಣ್ ಎಡ್ಮೆ ಮಾರ್,ಕಾರ್ಯಾಲಯ ಸಮಿತಿಯ ಅಧ್ಯಕ್ಷ  ನವೀನ್ ಚಂದ್ರ ಪೂಜಾರಿ,ಮಾಧ್ಯಮ ಸಮಿತಿಯ ಸಂಚಾಲಕ  ಜಗನ್ನಾಥ ಶೆಟ್ಟಿ ಬಾಳ,ಪಾರ್ಕಿಂಗ್ ಸಮಿತಿಯ ಉದಯ ಬಿ.ಸುವರ್ಣ,ಆರ್ಥಿಕ ಸಮಿತಿಯ ವಿಶ್ವನಾಥ ಶೆಟ್ಟಿ ಪಂದುಬೆಟ್ಟು ಸಭೆಯಲ್ಲಿ ಉಪಸ್ಥಿತರಿದ್ದರು.ಕಾರ್ಯದರ್ಶಿ ರಮೇಶ್ ಬಂಗೇರ ವಂದಿಸಿದರು.