-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ಸಸಿಹಿತ್ಲು  ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಪುನರ್‌ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ,ಧಾರ್ಮಿಕ ಸಭಾ ಕಾರ್ಯಕ್ರಮ

ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಪುನರ್‌ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ,ಧಾರ್ಮಿಕ ಸಭಾ ಕಾರ್ಯಕ್ರಮ

ಹಳೆಯಂಗಡಿ : ಸಸಿಹಿತ್ಲು  ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಪುನರ್‌ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವದ ಅಂಗವಾಗಿ  ಧಾರ್ಮಿಕ ಸಭಾ ಕಾರ್ಯಕ್ರಮವು ಬುಧವಾರದಂದು  ಉಳ್ಳಾಯ ಮದಿಪು ಚಾವಡಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು   ಕಟೀಲು ದೇವಳದ ಅನುವಂಶಿಕ  ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಅವರು  ದೀಪ ಬೆಳಗಿಸಿ ಉದ್ಘಾಟಿಸಿ  ಆಶೀರ್ವಚನ ನೀಡಿದರು. ಸಸಿಹಿತ್ಲು  ಬಿಲ್ಲವರ ಹಿತವರ್ಧಕ ಸಂಘದ ಅಧ್ಯಕ್ಷ ಜಗನ್ನಾಥ ಕೋಟ್ಯಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಮಂಗಳೂರು ಅಸೋಸಿಯೇಶನ್ ಅಪ್ ಸೌದಿ ಅರೇಬಿಯದ ಸ್ಥಾಪಕ ಅಧ್ಯಕ್ಷ ರವಿ ಎಲ್ ಕರ್ಕೇರ, ಬಿಲ್ಲವರ ಅಸೋಶಿಯೇಶನ್ ಮುಂಬಾಯಿ ಇದರ ಉಪಾಧ್ಯಕ್ಷ ಸುರೇಶ್ ಕುಮಾರ್ ಕದ್ರಿ, ಶ್ರೀ ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸಿ.ಬಿ.ಕರ್ಕೇರ, ಭಾರತ್ ಕೋ ಅಪರೇಟಿವ್‌ ಬ್ಯಾಂಕ್ ನ ನಿರ್ದೇಶಕ ಗಣೇಶ್‌ ಡಿ ಪೂಜಾರಿ, ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿಯ ಕೋಶಾಧಿಕಾರಿ  ಗುರಿಕಾರಾದ ಮಂಜೋಡಿ ದೇವು, ಜುಮಾದಿ ಪಾತ್ರಿ ದಾಮೋದರ ಪೂಜಾರಿ ಅಳಿವೆಕೋಡಿ,ಮುಂಬೈ ಬಿಲ್ಲವರ ಹಿತವರ್ದಕ ಸಂಘದ ಗೌರವ ಸಲಹೆಗಾರ ಲಕ್ಷ್ಮಣ್ ಸನೀಲ್, ಸುನೀತಾ ಸುವರ್ಣ, ಭಾರತ್‌ ಬ್ಯಾಕ್ ನ ಮಾಜೀ ನಿರ್ದೇಶಕ ರಾಜಾ ವಿ ಸಾಲ್ಯಾನ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಅಗ್ಗಿದ ಕಳಿಯ ಪ್ರಕಾಶ್ ನಿಸರ್ಗ, ಮುಂಬೈ ಬಿಲ್ಲವ ಹಿತವರ್ದಕ ಸಂಘದ ಸಂಚಾಲಕ ಪದ್ಮನಾಭಸಸಿಹಿತ್ಲು, ಮಹಿಳಾ ಸಮಿತಿಯ ಅಧ್ಯಕ್ಷೆ ಶಕುಂತಳ ಭೋಜ ಬಂಗೇರ,ಉದ್ಯಮಿ ವೇದ ಪ್ರಕಾಶ್ ಎಮ್ ಶ್ರೀಯಾನ್ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷೆ ಪುಷ್ಪಾ ದಯಾನಂದ್, ಮಹಿಳಾ ಸಮಿತಿಯ ಗೌರವಾಧ್ಯಕ್ಷ ಲೀಲಾ ವಸಂತ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿಯ ಸಂಯೋಜಕ ಅನಿಲ್‌ ಪೂಜಾರಿ, ಅಶೋಜ್ ಕುಕ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಲೋತ್ಸವ ಉದ್ಘಾಟನೆ ಉದ್ಯಮಿ ವೇದ ಪ್ರಕಾಶ್ ಎಮ್ ಶ್ರೀಯಾನ್ ಸಾಂಸ್ಕೃತಿಕ ಕಲೋತ್ಸವವನ್ನು ಉದ್ಘಾಟಿಸಿ ಭರತನಾಟ್ಯ ಕಲಾವಿದೆ ತವೇಶಿ ಜೆ ಕರ್ಕೇರ ಅವರಿಗೆ ಗೆಜ್ಜೆ ಹಸ್ತಾಂತರ ಮಾಡಿದರು ಮುಂಬೈ ಬಿಲ್ಲವ ಹಿತವರ್ದಕ ಸಂಘದ ಅಧ್ಯಕ್ಷ ಸತೀಶ್‌ ಕೋಟ್ಯಾನ್ ಸ್ವಾಗತಿಸಿ ಪ್ರಸ್ತಾವನೆಗೈದರು.
ಆಡಳಿತ ಮಂಡಳಿಯ ಕಾರ್ಯದರ್ಶಿ ನವೀನ್ ಕುಮಾ‌ರ್ ಧನ್ಯವಾದ ಸಮರ್ಪಿಸಿದರು. ದಿಲೀಪ್ ಕರ್ಕೇರ ಮತ್ತು ಎಸ್‌.ಆ‌ರ್ ಪ್ರಭಾತ್ ನಿರೂಪಿಸಿದರು. ಬಳಿಕ ದಾನಿಗಳಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ