-->

ಸಸಿಹಿತ್ಲುಶ್ರೀ ಭಗವತೀ ದೇವಸ್ಥಾನದಲ್ಲಿ  ಮಾರ್ಚ್ 4 ರಿಂದ 8ರವರೆಗೆ  ಬ್ರಹ್ಮಕಲಶೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ

ಸಸಿಹಿತ್ಲುಶ್ರೀ ಭಗವತೀ ದೇವಸ್ಥಾನದಲ್ಲಿ ಮಾರ್ಚ್ 4 ರಿಂದ 8ರವರೆಗೆ ಬ್ರಹ್ಮಕಲಶೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ

ಹಳೆಯಂಗಡಿ:  ಸಸಿಹಿತ್ಲುವಿನ  ಶ್ರೀ ಭಗವತೀ ದೇವಸ್ಥಾನದಲ್ಲಿ  ಮಾರ್ಚ್ 4 ರಿಂದ 8ರವರೆಗೆ  ಬ್ರಹ್ಮಕಲಶೋತ್ಸವವು ನಡೆಯಲಿದ್ದು, ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಸಸಿಹಿತ್ಲುವಿನ  ಶ್ರೀ ಭಗವತೀ ದೇವಸ್ಥಾನದಲ್ಲಿ ಭಾನುವಾರದಂದು ನಡೆಯಿತು. ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕ  ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಅವರು  ವಿಶೇಷ ಪ್ರಾರ್ಥನೆ ಸಲ್ಲಿಸಿದರು

ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು  ಬಿಡುಗಡೆಗೊಳಿಸಿದರು.

ದೇವಸ್ಥಾನದ  ಆಡಳಿತ ಸಮಿತಿ ಅಧ್ಯಕ್ಷ ವಾಮನ್‌ ಇಡ್ಯಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಹಿಸಿದ್ದರು. ಈ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಬೆಲ್ಬಡ, ಉದ್ಯಮಿಗಳಾದ  ಮುಂಬೈ ಬಿಲ್ಲವ ಸಮಾಜದ ನೇತಾರ ಎಲ್ ವಿ ಅಮೀನ್ ಮುಂಬೈ, ಧನಂಜಯ ಶೆಟ್ಟಿ ಸಸಿಹಿತ್ಲು, ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಸುನೀಲ್ ಆಳ್ವ,ದಿವಾಕರ ಸಾಮಾನಿ,ಕಸ್ತೂರಿ ಪಂಜ,ಚಂದ್ರ ಶೇಖರ ನಾನಿಲ್‌,ಗೀತಾ ಪಿ ಕುಮಾ‌ರ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಉದಯ ಸುವರ್ಣ ಅಗ್ಗಿದ ಕಳಿಯ, ವಿನೋದ್ ಸಾಲ್ಯಾನ್ ಬೆಳ್ಳಾಯರು,ವಿನೋದ್ ಬೋಳ್ಳೂರು  ದಿನಕರ ಎಸ್. ಹಳೆಯಂಗಡಿ, ಗೀತಾಂಜಲಿ ಸುವರ್ಣ, ಸತೀಶ್ ಶೆಟ್ಟಿ ಎಕ್ಕಾರು, ಶೋಬೇಂದ್ರ ಸಸಿಹಿತ್ಲು, ವಿ ಕೆ ಯಾದವ್ ಭೋಜ ಗುರಿಕಾರ,ರಮೇಶ್ ಬಂಗೇರ, ಸುರೇಶ್ ಬಂಗೇರ,ಸವಿತಾ ಉದಯ್,ರಜತ್ ಸಸಿಹಿತ್ಲು,ಮೋಹನ್ ಸುವರ್ಣ,ಗಿರೀಶ್ ಶ್ರಿಯಾನ್,ಮೋಹನ್ ಶೆಟ್ಟಿಗಾ‌ರ್,ಕಿಶೋರ್ ಗುರಿಕಾರ,ನಾಗೇಶ್ ಬಂಗೇರ,ಧೀರಜ್ ಶ್ರಿಯಾನ್,ಕಿರಣ್ ಗುರಿಕಾರ ಮೊದಲಾದವರು  ಉಪಸ್ಥಿತರಿದ್ದರು. ರಾಜೇಂದ್ರ ಪ್ರಸಾದ್‌ ಎಕ್ಕಾರು  ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ