Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪಾವಂಜೆ:ಮಹಿಳೆಗೆ ಲಾರಿ ಡಿಕ್ಕಿ,ಗಂಭೀರ ಗಾಯ

ಪಾವಂಜೆ:ಪಾನಮತ್ತ ಲಾರಿ ಚಾಲಕನ ಅಡ್ಡಾದಿಡ್ಡಿ ಚಾಲನೆಯಿಂದ ಲಾರಿ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಘಟನೆ ಪಾವಂಜೆಯ ವಾಣಿ ಶಾಲಾ ಬಳಿ ಶುಕ್ರವಾರ ಸಂಭವಿಸಿದೆ.ಘಟನೆಯಲ್ಲಿ ಪಾವಂಜೆ ನಿವಾಸಿ ವಾಣಿ ಶಾಲೆಯ ಸಿಬ್ಬಂದಿ ಕುಸುಮ(42) ಲಾರಿಯಡಿಗೆ ಸಿಲುಕಿ  ಗಂಭೀರವಾಗಿ ಗಾಯಗೊಂಡಿದ್ದಾರೆ.ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.