Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಫೆ. 14 ರಿಂದ 23 ತನಕ ಪಾವಂಜೆ ವಾರ್ಷಿಕ ಜಾತ್ರೆ



ಹಳೆಯಂಗಡಿ: ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೆಯು  ಫೆ.14ರಿಂದ 23 ರ ತನಕ  ನಡೆಯಲಿದೆ.

ಫೆ. 15ರಂದು ಧ್ವಜಾರೋಹಣ, ನಿತ್ಯ ಬಲಿ ಉತ್ಸವಾದಿಗಳು ನಡೆದು ಫೆ. 21ರಂದು ಹಗಲು ರಥೋತ್ಸವ, ಅನ್ನ ಸಂತರ್ಪಣೆ ಮತ್ತು ಫೆ. 22ರಂದು ಬೆಳಗ್ಗೆ ಕವಾಟೋದ್ಘಾಟನೆ, ತುಲಾಭಾರ, ರಾತ್ರಿ ಬಲಿ ಹೊರಟು ಓಕುಳಿ, ಕಟ್ಟೆ ಪೂಜೆ, ಮಹಾರಥೋತ್ಸವ, ತೆಪ್ಪೋತ್ಸವ ಮತ್ತು ಧ್ವಜಾವರೋಹಣ ನಡೆಯುವುದು ಎಂದು ಆಡಳಿತ ಮಂಡಳಿಯ ಪ್ರಕಟಣೆ  ತಿಳಿಸಿದೆ.