Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಫೆ.28,ಮಾ.1:ಶ್ರೀ ನಾಗಬ್ರಹ್ಮ ಸ್ಥಾನ ಬೆಮ್ಮೆರಪಾಡಿ ಪಂಜ ಮೊಗಪಾಡಿ ಇಲ್ಲಿನ ವಾರ್ಷಿಕ ಸಮಾರಾಧನೆ

ಕಿನ್ನಿಗೋಳಿ: ಶ್ರೀ ನಾಗಬ್ರಹ್ಮ ಸ್ಥಾನ ಬೆಮ್ಮೆರಪಾಡಿ ಪಂಜ ಮೊಗಪಾಡಿ ಇಲ್ಲಿನ  ವಾರ್ಷಿಕ ಸಮಾರಾಧನೆ, ಶ್ರೀ ನಾಗದೇವರಿಗೆ  ಸಾಮೂಹಿಕ ತ್ರಂಬಿಲ,ಅಶ್ಲೇಷ ಪೂಜೆ, ಮಹಾಪೂಜೆ ಪರಿವಾರ ದೈವಗಳಿಗೆ ಚೌತಿ ಹಬ್ಬ ಫೆ ೨೮ ಮತ್ತು ಮಾ ೧ ರಂದು ನಡೆಯಲಿದೆ. ಫೆ ೨೮ ರಂದು  ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೇ ೧ ರಂದು ಬೆಳಿಗ್ಗೆಯಿಂದ  ಭಜನಾ ಕಾರ್ಯಕ್ರಮ, ಬೆಳಿಗ್ಗೆ ೧೦.೩೦ ಕ್ಕೆ ಅತ್ತೂರು ಬೈಲು ವೆಂಕಟರಾಜ ಉಡುಪ ಇವರ ನೇತೃತ್ವದಲ್ಲಿ  ಶ್ರೀ ನಾಗದೇವರಿಗೆ ಸಾಮೂಹಿಕ ನಾಗತಂಬಿಲ ಮತ್ತು ಅಶ್ಲೇಷ ಪೂಜೆ  ಹಾಗೂ ಮದ್ಯಾಹ್ನ ೧೨.೦೦ ಗಂಟೆಗೆ ನವಕ ಪ್ರಧಾನ ಕಲಶಾಭಿಷೇಕ, ಮಹಾಪೂಜೆ ಸಮಾರಾಧನೆ  ನಾಗಬ್ರಹ್ಮ, ಮಹಾ ಅನ್ನಸಂತರ್ಪಣೆ,  ಪರಿವಾರ ದೈವಗಳಿಗೆ ಕುರಿ ತಂಬಿಲ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.