Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಯಕ್ಷಗಾನ ನಾಟ್ಯ ತರಗತಿ ಶುಭಾರಂಭ - ಸನಾತನ ಸಂಸ್ಕೃತಿ ಬೆಳೆಸುವಲ್ಲಿ ಯಕ್ಷಗಾನದ ಕೊಡುಗೆ ಅಪಾರ,



ಕಿನ್ನಿಗೋಳಿ:ಕರಾವಳಿಯ  ಗಂಡುಕಲೆ  ಎಂದೇ ಪ್ರಖ್ಯಾತಿ ಪಡೆದಿರುವ ಯಕ್ಷಗಾನದ  ನಾಟ್ಯ  ತರಗತಿಯು  ನಿಡ್ಡೋಡಿ ಬಂಟರ ಸಂಘ ಪಾತ್ರಬೈಲು ರಾಘವ ಶೆಟ್ಟಿ  ಸ್ಮಾರಕ  ಭವನದಲ್ಲಿ ಹೆಸರಾಂತ   ಯಕ್ಷ ಗುರುಗಳಾದ  ರಕ್ಷಿತ್ ಶೆಟ್ಟಿ ಪಡ್ರೆ ಹಾಗೂ ಧನರಾಜ್  ಪೊಳಲಿ ಯವರ ಮುಂದಾಳತ್ವದಲ್ಲಿ  ಭಾಗವತ ಸುದೇಶ್ ಶೆಟ್ಟಿ  ಕುತ್ತೆತ್ತೂರು  ಹಾಗೂ  ಬಳಗದವರ  ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಉದ್ಘಾಟನೆಗೊಂಡಿತು. 

ಕಾರ್ಯಕ್ರಮದಲ್ಲಿ    ಡಾ. ಯೋಗಿ ಶ್ರೀ  ಸುಧಾಕರ ತಂತ್ರಿ ಪುತ್ತಿಗೆಯಯವರು ಮಾತನಾಡಿ   ಸನಾತನ ಸಂಸ್ಕೃತಿ ಬೆಳೆಸುವಲ್ಲಿ ಯಕ್ಷಗಾನದ ಕೊಡುಗೆ  ಅಪಾರ, ರಾಮಾಯಣ -ಮಹಾಭಾರತ  ಮುಂತಾದ ಪುರಾಣ ಕಥೆಗಳು ಜ್ಞಾನವನ್ನು ತಿಳಿಸುವಲ್ಲಿ  ಮಹತ್ತರ  ಪಾತ್ರವಹಿಸುತ್ತದೆ ಎಂದರು.ಮಕ್ಕಳನ್ನು ಯಕ್ಷಗಾನಕ್ಕೆ  ಸೇರಿಸುದರಿಂದ ಅವರ ಭವಿಷ್ಯ ಉಜ್ವಲಗೊಳ್ಳುತ್ತದೆ. ಇಂತಹ ಕೆಲಸ  ಮಾಡಲು ಮುಂದಾದ  ಧನರಾಜ್ ಪೊಳಲಿಯವರ  ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ  ನಿಡ್ಡೋಡಿ  ಬಂಟರ ಸಂಘದ ಅಧ್ಯಕ್ಷ   ಬಿ. ಆರ್. ಪ್ರಸಾದ್ ಶೆಟ್ಟಿ ಅವರು   ಮಕ್ಕಳಲ್ಲಿ ಸಂಸ್ಕಾರ, ಸೌಜನ್ಯ ಹಾಗೂ ಜೀವನ ಮೌಲ್ಯಗಳನ್ನು ಬೆಳೆಸುವಲ್ಲಿ ಯಕ್ಷಗಾನ ಪೂರಕವಾಗಿರುತ್ತದೆ ಎಂದರು.

ಈ ಸಂದರ್ಭ ಭಾಸ್ಕರ  ದೇವಸ್ಯ, ಶ್ರೀಮತಿ ಪ್ರೇಮ ಶೆಟ್ಟಿ,  ಉಗ್ಗಪ್ಪ ಮೂಲ್ಯ, ಸಂಜೀವ  ಪೂಜಾರಿ, ಗಣೇಶ್  ಗೌಡ, ಸತೀಶ್ ಶೆಟ್ಟಿ,  ದುರ್ಗೇಶ್ ರೈ  ಉಪಸ್ಥಿತರಿದ್ದರು. ಕು.ಅಶ್ಮಿತಾ ಸ್ವಾಗತಿಸಿದರು.ಶ್ರೀಮತಿ ಅಮಿತಾ ಸುರೇಶ್  ಕಾರ್ಯಕ್ರಮ ನಿರೂಪಿಸಿದರು. ಧನರಾಜ್ ಪೊಳಲಿ  ವಂದಿಸಿದರು.ಬಂಟರ ಸಂಘ (ರಿ )ನಿಡ್ಡೋಡಿ -ಕಲ್ಲಮುಂಡ್ಕೂರು   ಹಾಗೂ ಯಕ್ಷಾಭಿಮಾನಿಗಳು  ಶುಂಠಿಲಪದವು  ಸಹಕರಿಸಿದ್ದರು.