-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ಕೇಂದ್ರ ಸರ್ಕಾರದಿಂದ ಗಾಂಧೀಜಿಯ ಗ್ರಾಮಸ್ವರಾಜ್ಯಕ್ಕೆ ಧಕ್ಕೆ ; ಉಗ್ರಪ್ಪ

ಕೇಂದ್ರ ಸರ್ಕಾರದಿಂದ ಗಾಂಧೀಜಿಯ ಗ್ರಾಮಸ್ವರಾಜ್ಯಕ್ಕೆ ಧಕ್ಕೆ ; ಉಗ್ರಪ್ಪ


ಮೂಲ್ಕಿ :ಮಹಾತ್ಮ ಗಾಂದೀಜಿ ಅವರು ದೇಶದ ಸ್ವಾತಂತ್ರ್ಯ ವನ್ನು ಅಹಿಂಸೆಯ ಮೂಲಕ ಗ್ರಾಮ ಗ್ರಾಮದಲ್ಲಿ ಕ್ರಾಂತಿಕಾರಿ ಬದಲಾವಣೆಯ ತಂದ ಗೌರವದಿಂದ ಕಾರ್ಮಿಕರ ಸಂಜೀವಿನಿಯಾಗಿದ್ದ ಮನರೆಗಾ ಯೋಜನೆಯನ್ನು ತಿರುಚುವ ಮೂಲಕ ಕೇಂದ್ರ ಸರ್ಕಾರವು ಗಾಂಧೀಜಿಯ ಗ್ರಾಮಸ್ವರಾಜ್ಯಕ್ಕೆ ಧಕ್ಕೆ ಮಾಡಿದೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ವಿ.ಎಸ್.ಉಗ್ರಪ್ಪ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಬದಲಿಸಿರುವುದನ್ನು ಖಂಡಿಸಿ ಕಾಯ್ದೆಯ ಮರುಜಾರಿಗೆ  ಆಗ್ರಹಿಸುವ ಸುಳ್ಯದಿಂದ ಮೂಲ್ಕಿಯವರೆಗೆ ನಡೆದ ಪಾದಾಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾಂಗ್ರೆಸ್ ಗಾಂಧೀಜಿಯವರ ತತ್ವಾದರ್ಶವನ್ನು ಪಾಲಿಸುವ ಪಕ್ಷವಾಗಿದೆ. ಮೋದಿಯವರು 11 ವರ್ಷದಲ್ಲಿ 216 ಲಕ್ಷ ಕೋಟಿ ಸಾಲಕ್ಕೆ ದೂಡಿದ  ಸಾದನೆ ಮಾತ್ರ, ಚಿನ್ನ-ಬೆಳ್ಳಿ ಏರಿಕೆಯೇ ಆಡಳಿತಕ್ಕೆ ಸಾಕ್ಷಿಯಾಗಿದೆ. ಸುಳ್ಳಿನ ಸರದಾರ ಮಾತಿನ ಮಲ್ಲ ಮೋದಿಗೆ ಜನಬೆಂಬಲ ಕಡಿಮೆಯಾಗುತ್ತಿದೆ. ನೆಹರು, ಗಾಂಧೀಜಿಯ ಹೆಸರು ಅಳಿಸುವ ಹುನ್ನಾರ ನಡೆಯುತ್ತಿದೆ, ಮಂಗಳೂರಿನ ಸ್ಮಾಟ್೯ ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ.  ಮನ್ ರೇಗಾ ಯೋಜನೆಯ ತಿರುಚುವಿಕೆಯೂ ನಡೆಯುತ್ತಿದೆ.  ದೇಶದಲ್ಲಿ ಅನಧಿಕೃತ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ದಕ್ಷಿಣ ಕನ್ಬಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಮಾಜಿ ಸಚಿವ ಅಭಯಚಂದ್ರ, ಶಾಸಕ ಐವನ್ ಡಿಸೋಜಾ, ಪ್ರಮುಖರಾದ ಇನಾಯತ್ ಆಲಿ, ಮಮತಾ ಗಟ್ಟಿ, ಶಶಿಧರ ಹೆಗ್ಡೆ, ಅಪ್ಪಿ, ಶಾಲೆಟ್ ಪಿಂಟೋ, ಉಷಾ ಅಂಚನ್, ಇಬ್ರಾಹಿಂ ನವಾಜ್, ಸುಹಾನ್ ಆಳ್ವಾ, ಮೂಲ್ಕಿಯ ವಸಂತ್ ಬೆರ್ನಾಡ್, ಮೋಹನ್ ಕೋಟ್ಯಾನ್, ಅಶೋಕ್ ಪೂಜಾರ್, ಮಂಜುನಾಥ ಕಂಬಾರ, ರಕ್ಷಿತ್ ಪೂಜಾರಿ, ವಿಲ್ಮಾ ಡಿಕೋಸ್ತ, ಗೋಪಿನಾಥ ಪಡಂಗ ಮತ್ತಿತರರು ಇದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ