Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಪ್ಪನಾಡು ದೇವಳದ ನೂತನ ರಥಕ್ಕೆ ದೇಣಿಗೆ

ಕಿನ್ನಿಗೋಳಿ: ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಸ್ಥಾನದ  ಧರ್ಮದರ್ಶಿ ಮೋಹನದಾಸ ಸುರತ್ಕಲ್‌ ಅವರು  ಮೂಲ್ಕಿ ಒಂಭತ್ತು ಮಾಗಣೆಯ  ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ  ದೇವಸ್ಥಾನದ   ನೂತನ ರಥದ ನಿರ್ಮಾಣಕ್ಕೆ  ದೇಣಿಗೆಯಾಗಿ ರೂ 50,000/  ರೂ ವನ್ನು ನೀಡಿದರು.
                  ಈ ಸಂದರ್ಭದಲ್ಲಿ ದೇವಾಲಯದ ಅನುವಂಶಿಕ ಮೊಕ್ತೇಸರ ಹಾಗೂ ಸೀಮೆಯ ಅರಸರಾದ  ಎಂ. ದುಗ್ಗಣ್ಣ ಸಾವಂತರು ದಾನಿಗಳನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಕ್ಷೇತ್ರದ ಅರ್ಚಕರಾದ  ನರಸಿಂಹ ಭಟ್ ,ಶ್ರೀಮತಿ ಚೇತನಾ ಮೋಹನದಾಸ, ಕಾರ್ಯದರ್ಶಿ ಶುಭಲಕ್ಷೀ ಕಿಲ್ಪಾಡಿ ಉಪಸ್ಥಿತರಿದ್ದರು.