Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮೂಲ್ಕಿ:ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ಯೂತ್‌ ಕ್ಲಬ್‌ ವಾರ್ಷಿಕೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಲ್ಕಿ:ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್‌ನ 17ನೇ ವಾರ್ಷಿಕೋತ್ಸವ ಹಾಗೂ ಮಹಾ ಶಿವರಾತ್ರಿಯ ಪ್ರಯುಕ್ತ ಫೆ. 21 ರ ಶನಿವಾರದಂದು  ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನದ  ವಠಾರದಲ್ಲಿ  ನಡೆಯಲಿರುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,ಧಾರ್ಮಿಕ  ಸಭಾ ಕಾರ್ಯಕ್ರಮ,ಸಾಂಸ್ಕ್ರತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದಲ್ಲಿ  ಬಿಡುಗಡೆಗೊಳಿಸಲಾಯಿತು.ಈ  ಸಂದರ್ಭ ಊರ ಗುರಿಕಾರ ಹರೀಶ್ಚಂದ್ರ ಪಿ ಸಾಲ್ಯಾನ್‌, ತೇಜ ಪೂಜಾರಿ,ಕೃಷ್ಣ ಆರ್‌ ಕೋಟ್ಯಾನ್‌ ಸಾನದ ಮನೆ,ಸಮಿತಿಯ ಅಧ್ಯಕ್ಷ ಪ್ರಕಾಶ್‌ ಸುವರ್ಣ,ಪ್ರಧಾನ ಕಾರ್ಯದರ್ಶಿ ಶೇಖರ್‌ ಪೂಜಾರಿ,ಕೋಶಾಧಿಕಾರಿ ರಮನಾಥ  ಸುವರ್ಣ,ಹೇಮಂತ್‌, ದಯಾನಂದ್,ಯೂತ್‌ ಕ್ಲಬ್‌ ನ ಅಧ್ಯಕ್ಷ ಚರಣ್‌ ಬಂಗೇರ,ಪ್ರಧಾನ ಕಾರ್ಯದರ್ಶಿ ಕಾರ್ತಿಕ್‌ ಕೋಟ್ಯಾನ್‌,ಗೌರವಾಧ್ಯಕ್ಷ ಕೃಷ್ಣ ಸುವರ್ಣ,ಕೋಶಾಧಿಕಾರಿ ಸುನೀಲ್‌ ಕೋಟ್ಯಾನ್‌,ಜೊತೆ ಕಾರ್ಯದರ್ಶಿ ಪ್ರಫುಲ್‌ ಎಸ್‌ ಅಂಚನ್‌,ಸಂಚಾಲಕರಾದ ಜೀವನ್‌ ಆರ್‌ ಕೋಟ್ಯಾನ್‌,ಹಿತೇಶ್‌ ಸಾಲ್ಯಾನ್‌, ಮಹಿಳಾ ಮಂಡಳದ ಅಧ್ಯಕ್ಷೆ ಲತಾ ಶೇಖರ್‌,ಸಮಿತಿ,ಮಹಿಳಾ ಮಂಡಳಿ,ಯೂತ್‌ ಕ್ಲಬ್‌  ನ ಪದಾಧಿಕಾರಿಗಳು ಉಪಸ್ಥಿತರಿದ್ದರು.