ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್‌ನ 17 ನೇ ವಾರ್ಷಿಕೋತ್ಸವ,ಸಾಧಕರಿಗೆ ಸನ್ಮಾನ
Thursday, February 26, 2026
ಮೂಲ್ಕಿ:ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕಾರ್ಯ ಹೆತ್ತವರಿಂದ ಆಗಬೇಕು.ಹೆತ್ತವರು ಮೊಬ್ಯೆಲ್,ಧಾರವಾಹಿಗಳಿಂದ ದೂರವಿದ್ದು ಭಜನೆ,ಮತ್ತಿತರ ಧಾರ್ಮಿಕ ಕಾರ್ಯಗಳ ಮಕ್ಕಳಿಗೆ ಉತ್ತಮ,ಸಂಸ್ಕಾರ,ಸಂಸ್ಕ್ರತಿಯನ್ನು ತಿಳಿಸಿದಲ್ಲಿ ಮಕ್ಕಳು ಸಂಸ್ಕಾರವಂತರಾಗಲು ಸಾಧ್ಯವೆಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ತಂತ್ರಿಗಳಾದ ಶಿವಾನಂದ ಶಾಂತಿ ಮೂಡುಬಿದ್ರಿ ಹೇಳಿದರು.ಮೂಲ್ಕಿಯ ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನದ ಸಮಿತಿಯ ಸಹ ಸಂಸ್ಥೆ ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್‌ನ 17 ನೇ ವಾರ್ಷಿಕೋತ್ಸವ ಹಾಗೂ ಮಹಾ ಶಿವರಾತ್ರಿಯ ಪ್ರಯುಕ್ತ ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನದ ವಠಾರದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಪ್ರತಿಭಾ ಪುರಸ್ಕಾರ, ಊರಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಯುವ ಸಮುದಾಯದಲ್ಲಿ ಧಾರ್ಮಿಕ ಪ್ರಜ್ಞೆ ಕಡಿಮೆಯಾಗುತ್ತಿದ್ದು ದೈವಸ್ಥಾನ,ದೇವಸ್ಥಾನಗಳಲ್ಲಿ ಭಜನೆಯ ಮೂಲಕ ಧರ್ಮದ ಜಾಗೃತಿ ಮೂಡಿಸುವ ಕಾರ್ಯವಾಗಬೇಕೆಂದು ಅವರು ಹೇಳಿದರು., ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಪ್ರಭಾಕರ್ ಪೂಜಾರಿ ವಹಿಸಿದ್ದು ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತೆ ಸಿಂಧು ಗುಜರನ್ ,ನಡಿಕುದ್ರು ಶ್ರೀ ಜಾರಂದಾಯ ದೈವಸ್ಥಾನದ ಅರ್ಚಕ ನಿರಂಜನ್ ಪೂಜಾರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ದ್ಯೆವ ನರ್ತಕ ಭಾಸ್ಕರ್ ಬಂಗೇರ ಪಡುಬಿದ್ರಿ ,ಜಯ ಕೃಷ್ಣ ಕೋಟ್ಯಾನ್ ಮತ್ತು ದ್ಯೆವದ ಪರಿಚಾರಕ ಮಾಧವ ಮಡಿವಾಳ, ಚಿತ್ರಾಪು ರವರನ್ನು ಸನ್ಮಾನಿಸಲಾಯಿತು.ಕೊಳಚಿಕಂಬಳ ಸಾನದಮನೆ ದಿ.ರಾಮಣ್ಣ ಪೂಜಾರಿ ಮತ್ತು ದಿ.ಹರಿಯಪ್ಪ ಕೋಟ್ಯಾನ್ ಸ್ಮರಣಾರ್ಥ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಗ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಮೂಲಕ ವಿದ್ಯಾರ್ಥಿ ವೇತನ ನೀಡಲಾಯಿತು.ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಸಾಧಕರನ್ನು,ದಾನಿಗಳನ್ನು ಗೌರವಿಸಲಾಯಿತು. ಉದ್ಯಮಿಗಳಾದ ಪ್ರವೀಣ್ ಕುಮಾರ್ ಬೊಳ್ಳೂರು,ಮೂಲ್ಕಿ ಪ್ರಬೋದ್ ಕುಡ್ವ, ಮಂತ್ರ ಸರ್ಫ್ ಕ್ಲಬ್, ಕೊಳಚಿಕಂಬಳದ ನಟರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಕೊಳಚಿಕಂಬಳ ಶ್ರೀ ಜಾರಂದಾಯ ದ್ಯೆವಸ್ತಾನದ ಗುರಿಕಾರರಾದ ಹರೀಶ್ಚಂದ್ರ ಪಿ ಸಾಲ್ಯಾನ್,ತೇಜ ಪೂಜಾರಿ ಪ್ರಾಣೇಶ್ ಪೂಜಾರಿ ಸಾನದ ಮನೆ, ಕೃಷ್ಣ ಕೋಟ್ಯಾನ್ ಸಾನದ ಮನೆ, ದ್ಯೆವಸ್ತಾನದ ಸಮಿತಿಯ ಉಪಾಧ್ಯಕ್ಷ ಹೇಮನಾಥ ಕೋಟ್ಯಾನ್,ಮಹಿಳಾ ಮಂಡಳಿಯ ಅಧ್ಯಕ್ಷೆ ಲತಾ ಶೇಖರ್,ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್ ನ ಅಧ್ಯಕ್ಷ ಚರಣ್ ಬಂಗೇರ,ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕೋಟ್ಯಾನ್,ಕೋಶಾಧಿಕಾರಿ ಸುನೀಲ್ ಕೋಟ್ಯಾನ್ ಮತ್ತು ಪದಾಧಿಕಾರಿಗಳು ಉಪಸ್ತಿತರಿದ್ದರು.ಮಹಿಳೆಯರಿಂದ ಮತ್ತು ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ, ಲಕುಮಿ ತಂಡದಿಂದ ಆಂಟೀ ಬೊಕ್ಕ ಅಂಕಲ್ ತುಳು ಹಾಸ್ಟೆಮಯ ನಾಟಕ ಪ್ರದರ್ಶನ ಜರಗಿತು. ಯೂತ್ ಕ್ಲಬ್ ಅಧ್ಯಕ್ಷ ಚರಣ್ ಬಂಗೇರ ಸ್ವಾಗತಿಸಿದರು,ಹರೀಶ್ಚಂದ್ರ ಪಿ ಸಾಲ್ಯಾನ್ ಪ್ರಸ್ತಾವನೆಗೈದರು,ಲತಾ ಶೇಖರ್ ವಂದಿಸಿದರು,ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿದರು.