ಕನ್ನಡ ಸಾಹಿತ್ಯ ಸಮ್ಮೇಳನ, ಅಧ್ಯಕ್ಷರಿಗೆ ಆಹ್ವಾನ
Wednesday, February 25, 2026
ಕಿನ್ನಿಗೋಳಿ : ಕಟೀಲು ದೇಗುಲದ ನಂದಿನಿ ನದಿಯ ಕುದ್ರುವಿನಲ್ಲಿ ಮಾರ್ಚ್ 1 ರಂದು ನಡೆಯಲಿರುವ ಮೂಲ್ಕಿ ತಾಲೂಕು 3ನೆಯ ಕನ್ನಡ ಸಾಹಿತ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಖ್ಯಾತ ರಂಗ ನಟ ಕೃಷ್ಣಮೂರ್ತಿ ಕವತ್ತಾರು ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಯಿತು. ರಾಮ ಮೂರ್ತಿ ಕವತ್ತಾರು, ಕಸಾಪದ ವೀಣಾ ಶಶಿಧರ, ದೇವದಾಸ ಮಲ್ಯ, ಕೃಷ್ಣರಾಜ ಭಟ್, ಮಾಧವ ಕೆರೆಕಾಡು, ಜಯಂತ ಸುವರ್ಣ, ಮಿಥುನ ಕೊಡೆತ್ತೂರು ಮತ್ತಿತರರು ಉಪಸ್ಥಿತರಿದ್ದರು.