Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿನ್ನಿಗೋಳಿ ಯುಗಪುರುಷದಲ್ಲಿ ಸಾಹಿತ್ಯಾವಲೋಕನ ಕಾರ್ಯಕ್ರಮ


ಕಿನ್ನಿಗೋಳಿ: ಯುಗಪುರುಷ ಕಿನ್ನಿಗೋಳಿ ಹಾಗೂ ಕಥಾಬಿಂದು ಪ್ರಕಾಶನ ಇವರ ಆಶ್ರಯದಲ್ಲಿ  ಸಾಹಿತ್ಯಾವಲೋಕನ ಕಾರ್ಯಕ್ರಮವು ಇದೇ ಫೆ. 27ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜರಗಲಿದೆ. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಲಿರುವರು. ಕಾರ್ಯಕ್ರಮವನ್ನು ಯುಗಪುರುಷದ ಪ್ರಧಾನ ಸಂಪಾದಕರಾದ ಕೊಡೆತ್ತೂರು ಭುವನಾಬಿರಾಮ ಉಡುಪರು ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಡಾ. ಕೊಳ್ಚಪ್ಪೆ ಗೋವಿಂದ ಭಟ್‌ರವರು ಭಾವವಹಿಸಲಿರುವರು. ಕೆ.ವಿ.ಲಕ್ಷ್ಮಣಮೂರ್ತಿ, ಜಯಾನಂದ ಪೆರಾಜೆ, ಪಿ. ವಿ.  ಪ್ರದೀಪಕುಮಾರ್‌ರವರು ಉಪಸ್ಥಿತರಿರುವರು. ಸುನೀತಾ ಪ್ರದೀಪಕುಮಾರ್ ರಚಿತ 'ಶ್ರೀ ಮಾತಾ ವೈಷ್ಣೋ ದೇವಿ', ಜಾನಕಿದೇವಿ ರಚಿತ 'ಬೃಂದಾವನ', ಡಾ. ಪ್ರೇಮಪಿ ವೈ. ಕೆ. ಮೋಳೆ ರಚಿತ 'ನೀಲಿರಾಗ', ನಾ. ಭಾ. ಕೆಂಪರಾಜ್ ಶಾಂತಲ ರಚಿತ 'ನಾ ಕಂಡಂತೆ ರಾಜ' ಈ ನಾಲ್ಕು ಕೃತಿಗಳನ್ನು ಮೂಡುಬಿದ್ರೆಯ ಶ್ರೀಪತಿ ಭಟ್‌ರವರು ಬಿಡುಗಡೆಗೊಳಿಸಲಿರುವರು. ಈ ಸಂದರ್ಭದಲ್ಲಿ 20 ಕವಿಗಳಿಂದ ಕವಿಗೋಷ್ಠಿ ಜರಗಲಿದೆ. ಸಾಹಿತಿ ಪ್ರವೀಣ್ ವ್ಹಿ. ಕುಲಜರ್ಣಿ, ಪ್ರಕಾಶ ಸುವರ್ಣ ಕಟಪಾಡಿ, ಶ್ರೀಮತಿ ಅನಿತಾ ಶೆಣೈ ಇವರನ್ನು ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.