ಕೆಮ್ರಾಲ್ ಪರಿಸರದಲ್ಲಿ ಚಿರತೆ ಓಡಾಟ,ಸ್ಥಳೀಯರಲ್ಲಿ ಆತಂಕ
Tuesday, February 10, 2026
ಕಿನ್ನಿಗೋಳಿ:ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತೂರು ಹಾಲಿನ ಡೈರಿ ಬಳಿ ಸೋಮವಾರ ರಾತ್ರಿ ಚಿರತೆಯೊಂದು ಬೈಕ್ ಸವಾರಿಗೆ ಕಾಣಸಿಕ್ಕಿದ್ದು,ಗ್ರಾಮಸ್ಥರಲ್ಲಿ ಭಯದ ವಾತವರಣ ಸೃಷ್ಟಿಯಾಗಿದೆ. ಪಂಜ ಹರಿಪಾದೆಯ ಸಂತೋಷ್ ಮತ್ತು ಶಶಿಕುಮಾರ್ ಸಹೋದರರು ಕಟೀಲು ದೇವಸ್ಥಾನಕ್ಕೆ ಹೋಗಿ ವಾಪಾಸ್ಸಾಗುವ ವೇಳೆ ರಾತ್ರಿ 8 ರ ಸುಮಾರಿಗೆ ಅತ್ತೂರು ಹಾಲಿನ ಡೈರಿ ಬಳಿ ಚಿರತೆ ರಸ್ತೆ ದಾಟುತಿರುವುದನ್ನು ನೋಡಿದ್ದಾರೆ. ಕೂಡಲೇ ಸ್ಥಳಿಯರಿಗೆ ಮಾಹಿತಿ ನೀಡಿದ್ದು,ಸ್ಥಳೀಯ ಪಂಚಾಯತ್ ಸದಸ್ಯೆ ಜಯಂತಿ ಶೆಟ್ಟಿಯವರು ಸ್ಥಳೀಯರಿಗೆ ಕರೆ ಮಾಡಿ ಜಾಗ್ರತೆ ವಹಿಸುವಂತೆ ತಿಳಿಸಿದ್ದು, ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಬೆಳಿಗ್ಗೆ ಹಾಲಿನ ಡೈರಿ ಬಳಿ ಚಿರತೆಯ ಕಾಲಿನ ಹೆಜ್ಜೆ ಗುರುತು ಕಾಣಸಿಕ್ಕಿದ್ದು ,ಗ್ರಾಮಸ್ಥರಲ್ಲಿ ಭಯದ ವಾತವರಣ ಸೃಷ್ಟಿಯಾಗಿದೆ. ಕೃಷಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಪ್ರದೇಶದಲ್ಲಿ ದನ ಕರುಗಳು ಹೆಚ್ಚಿದ್ದು ಅಧಿಕಾರಿಗಳು ಕೂಡಲೇ ಇತ್ತ ಕಡೆ ಗಮನ ಹರಿಸಬೇಕಾಗಿದೆ ಎಂಬುದು ಗ್ರಾಮಸ್ಥರ ಆಗ್ರಹ.