-->

ಭಾರತೀಯ ಜನತಾ ಪಾರ್ಟಿ, ಮೂಲ್ಕಿ - ಮೂಡುಬಿದಿರೆ ಮಂಡಲದ ವತಿಯಿಂದ VBG RAM G ಕಾಯ್ದೆಯ ಕುರಿತು ಜನಜಾಗೃತಿ ಮೂಡಿಸಲು  ಬೃಹತ್ ಪಾದಯಾತ್ರೆ

ಭಾರತೀಯ ಜನತಾ ಪಾರ್ಟಿ, ಮೂಲ್ಕಿ - ಮೂಡುಬಿದಿರೆ ಮಂಡಲದ ವತಿಯಿಂದ VBG RAM G ಕಾಯ್ದೆಯ ಕುರಿತು ಜನಜಾಗೃತಿ ಮೂಡಿಸಲು ಬೃಹತ್ ಪಾದಯಾತ್ರೆ

ಕಿನ್ನಿಗೋಳಿ:ಭಾರತೀಯ ಜನತಾ ಪಾರ್ಟಿ, ಮೂಲ್ಕಿ - ಮೂಡುಬಿದಿರೆ ಮಂಡಲದ ವತಿಯಿಂದ VBG RAM G ಕಾಯ್ದೆಯ ಕುರಿತು ಜನಜಾಗೃತಿ ಮೂಡಿಸಲು ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಿಂದ ಕಿನ್ನಿಗೋಳಿಯ ಬಸ್ ನಿಲ್ದಾಣದ ತನಕ  ಬೃಹತ್ ಪಾದಯಾತ್ರೆಯು ನಡೆಯಿತು. ಈ ಸಂದರ್ಭ ಮಾತನಾಡಿದ  ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರು  ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರವನ್ನು ತೊಡೆದುಹಾಕಿ, ಗ್ರಾಮೀಣ ರೈತರು ಹಾಗೂ ಜನರಿಗೆ ಹೆಚ್ಚಿನ ಪ್ರಯೋಜನ ದೊರಕಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರವು 'ವಿಕಸಿತ ಭಾರತ - ಉದ್ಯೋಗ ಮತ್ತು ಜೀವನೋಪಾಯ ಮಿಷನ್ ಗ್ಯಾರಂಟಿ' (ವಿಬಿ - ಜಿ ರಾಮ್ ಜಿ ) ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.
ನರೇಗಾ ಯೋಜನೆಯಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದ್ದು, ಇದರಿಂದ ಹೆಚ್ಚಿನ ಕೂಲಿ ಮತ್ತು ಹೆಚ್ಚು ದಿನಗಳ ಕೆಲಸ ಲಭ್ಯವಾಗಲಿದೆ. ಈ ಹಿಂದೆ ನರೇಗಾ ಯೋಜನೆಯಲ್ಲಿ ಬೇಕಾಬಿಟ್ಟಿ ಭ್ರಷ್ಟಾಚಾರ ನಡೆಯುತ್ತಿತ್ತು. ಹೊಸ ಯೋಜನೆಯು ಅದನ್ನು ತಡೆಯುವ ಗುರಿ ಹೊಂದಿದೆ. ಇಂತಹ ಜನಪರ ಬದಲಾವಣೆಗಳಿಗೆ ಕಾಂಗ್ರೆಸ್ ಪಕ್ಷದ ವಿರೋಧವೇಕೆ ಎಂದು ಪ್ರಶ್ನಿಸಿದ ಶಾಸಕರು, ಈ ಯೋಜನೆಯ ಅನುಷ್ಠಾನದ ಕುರಿತು ಜನರು ಜಾಗೃತರಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್, ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ ಮೂಲ್ಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಜೀತಾ ಪೂಜಾರಿ, ಹರಿಪ್ರಸಾದ್‌ ಶೆಟ್ಟಿ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ, ಉಪಾಧ್ಯಕ್ಷ ಪದ್ಮಲತಾ ರಾವ್, ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ, ಉಪಾಧ್ಯಕ್ಷೆ ಶರ್ಮಿಳಾ ಶೆಟ್ಟಿ, ಬಿಜೆಪಿ ಮುಖಂಡರಾದ ರಮನಾಥ ಅತ್ತಾ‌ರ್, ರಂಜಿತ್ ಪೂಜಾರಿ ತೋಡಾ‌ರ್, ಭುವನಾಭಿರಾಮ ಉಡುಪ, ನಾಗರಾಜ ಪೂಜಾರಿ, ಲಕ್ಷಣ್ ಶೆಟ್ಟಿಗಾ‌ರ್, ಅಭಿಲಾಷ್ ಶೆಟ್ಟಿ ಕಟೀಲು , ರಂಗನಾಥ ಶೆಟ್ಟಿ ಮೂಲ್ಕಿ, ಆಶಾ ಸುವರ್ಣ, ಮಮತಾ ಪೂಂಜಾ, ಕುಶಲ್ ಡಿಸೋಜ, ರುಬೇನ್ ಕಿನ್ನಿಗೋಳಿ, ಭಾಸ್ಕರ ಶೆಟ್ಟಿಗಾರ್ ಕೆಂಚನಕೆರೆ, ಸ್ಟೇನಿ ಪಿಂಟೋ, ವಜ್ರಾಕ್ಷಿ ಶೆಟ್ಟಿ, ಜೈಸನ್ ನೀರುಡೆ, ಗ್ಲೆನ್, ಭಾಸ್ಕರ ಪೂಜಾರಿ ಉಲ್ಲಂಜೆ, ಪಟ್ಟಣ ಪಂಚಾಯತ್ ಸದಸ್ಯರಾದ ಲೋಕಯ್ಯ ಸಾಲ್ಯಾನ್, ಶೈಲೇಶ್ ಅಂಚನ್, ಗೋಪಾಲಕೃಷ್ಣ ಪುನರೂರು, ಧನುಷ್ ಶೆಟ್ಟಿಗಾರ್, ದಾಮೋದರ ಶೆಟ್ಟಿ, ಮಲ್ಲಿಕಾ ಪ್ರಕಾಶ್, ಮಲ್ಲಿಕಾ ಸಾಲ್ಯಾನ್ ಗುತ್ತಕಾಡು, ಪ್ರಣಿಕ್ ಕಿನ್ನಿಗೋಳಿ, ಅನಿತಾ ಡಿಸೋಜ, ಜೀವನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ