-->

ಫೆ.7 ಹಾಗೂ 8 ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳೋತ್ಸವ - ಸುವರ್ಣ ಮಹೋತ್ಸವ ಸಂಭ್ರಮ

ಫೆ.7 ಹಾಗೂ 8 ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳೋತ್ಸವ - ಸುವರ್ಣ ಮಹೋತ್ಸವ ಸಂಭ್ರಮ


ಕಿನ್ನಿಗೋಳಿ:ಪುರಾತನ ಸಂಪ್ರದಾಯ ಹಾಗೂ ದೈವಾರಾಧನೆಯೊಂದಿಗೆ ಅಧುನಿಕ ಸ್ಪರ್ಶದೊಂದಿಗೆ ನಡೆಯುವ  ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳವು ಇತಿಹಾಸದಲ್ಲಿ ಪ್ರಥಮವೆಂಬಂತೆ ಜೋಡುಕರೆಯಾಗಿ 50 ವರ್ಷಗಳು ಕಳೆದಿದ್ದು,  ಈ ಬಾರಿ ಸುವರ್ಣ  ಮಹೋತ್ಸವವನ್ನು ಆಚರಿಸುತ್ತಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಹೇಳಿದರು. ಅವರು ಐಕಳದಲ್ಲಿ  ನಡೆದ  ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಾಂತಾಬಾರೆ ಮತ್ತು ಬೂದಾಬಾರೆ ಎಂಬ ಅವಳಿ ವೀರ ಪುರುಷರು ಶತಮಾನಗಳ ಹಿಂದೆ ಸ್ವಂತ ಕಂಬಳ ಕರೆಯನ್ನು ನಿರ್ಮಿಸಿದ್ದರು.  ಮಂಜೊಟ್ಟಿ ಗದ್ದೆಯಲ್ಲಿ ಅವರು ನೆಟ್ಟ  ಎರಡು ಮರ ಈಗಲೂ ಇದ್ದು, ಅತ್ಯಂತ ಕಾರಣಿಕದ ಕಂಬಳವಾಗಿದೆ.ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಕಂಬಳವು  ಫೆ .7  ಮತ್ತು 8  ರಂದು  ನಡೆಯಲಿದ್ದು,  ಕಂಬಳ ಕೇವಲ ಕಂಬಳವಾಗಿರದೆ ಗ್ರಾಮದ ಉತ್ಸವವಾಗಿ ಆಚರಿಸಲಾಗುತ್ತಿದೆ.ಸುವರ್ಣ ಮಹೋತ್ಸವದ ಸಂದರ್ಭದಲ್ಲಿ  ನಾಗಾಲಯ, ಬ್ರಹ್ಮಸ್ಥಾನ ಸಹಿತ ಪರಿವಾರ ಶಕ್ತಿಗಳ ಶಿಲಾಮಯ ಗುಡಿಯ ಸ್ಥಾಪನೆಯೊಂದಿಗೆ ಬ್ರಹ್ಮಕಲಶೋತ್ಸವ, ದೈವಗಳ ಪುನರ್ ಪ್ರತಿಷ್ಠಾಪನೆ ನಡೆಯಲಿದೆ.  ಫೆ  6  ರಂದು ಕಟೀಲು  ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ನಡೆಯಲಿದೆ ಫೆ .7  ರಂದು ಬೆಳಿಗ್ಗೆ 8  ಗಂಟೆಗೆ ಧಾರ್ಮಿಕ  ವಿಧಿ ವಿಧಾನಗಳೊಂದಿಗೆ  ಕರೆ ಮೂಹೂರ್ತ , 9:30  ಕ್ಕೆ ಅಂತರಾಷ್ಟ್ರೀಯ ವಾಸ್ತು ತಜ್ಞ ಶ್ರೀ ಚಂದ್ರ ಶೇಖರ ಸ್ವಾಮೀಜೀ ಯವರು ದೀಪ ಬೆಳಗಿಸುದರ ಮೂಲಕ ಅಧಿಕೃತ ಚಾಲನೆ ನೀಡಲಿದ್ದಾರೆ. ಒರಿಸ್ಸಾ ಹೈ ಕೋರ್ಟ್ ನ ನ್ಯಾಯ ದೀಶರಾದ ಕೃಷ್ಣ ದೀಕ್ಷಿತ್,  ಮೂಲ್ಕಿ  ಸೀಮೆಯ ಅರಸರಾದ ದುಗ್ಗಣ್ಣ  ಸಾವಂತರು,  ಕಟೀಲು ದೇವಳದ ಅನುವಂಶಿಕ  ಅರ್ಚಕ ಅನಂತಪದ್ಮನಾಭ ಆಸ್ರಣ್ಣ,  ಧರ್ಮಗುರು  ರೆ.ಫಾ ಒಸ್ವಾಲ್ಡ್ ಮೊಂತೆರೋ, ಕಾಪು ಮಾರಿಯಮ್ಮ ದೇವಸ್ಥಾನದ ಧರ್ಮದರ್ಶಿ ಕೆ.ವಾಸುದೇವ ಶೆಟ್ಟಿ,  ಐಕಳ ಗ್ರಾ.ಪಂ  ಅಧ್ಯಕ್ಷ ದಿವಾಕರ ಚೌಟ, ಐಕಳ ಪ್ಯಾಮಿಲಿ ವೆಲ್ ಫೇರ್ ಟ್ರಸ್ಟ್ ನ ಅಧ್ಯಕ್ಷರಾದ ಕೆ.ಪಿ.ಕೆ ಹೆಗ್ಡೆ ಸಹಿತ ಗಣ್ಯಾತೀ ಗಣ್ಯರು  ಭಾಗವಹಿಸಲಿದ್ದಾರೆ. ಸಂಜೆ ನಡೆಯುವ  ಸಭಾ ಕಾರ್ಯಕ್ರಮವನ್ನು  ಸಹಕಾರ ರತ್ನ ಎಂ.ಎನ್ ರಾಜೇಂದ್ರ ಕುಮಾರ್ ಉದ್ಘಟಿಸಲಿದ್ದಾರೆ.  ವಿಧಾನ ಸಭಾಧ್ಯಕ್ಷ  ಯು.ಟಿ ಖಾದರ್ ,ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿ, ಕೇಂದ್ರ ಸಚಿವ ಎಚ್.ಡಿ ಕುಮಾರ ಸ್ವಾಮಿ,ಸಚಿವ ದಿನೇಶ್ ಗುಂಡೂ ರಾವ್, ಜಮೀರ್ ಅಹಮ್ಮದ್ ಖಾನ್, ಸಂತೋಷ್ ಲಾಡ್,  ಎಂ.ಆರ್.ಜಿ ಗ್ರೂಪ್ ನ  ಸಿ.ಎಂ.ಡಿ ಪ್ರಕಾಶ್ ಶೆಟ್ಟಿ,  ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಅದಾನಿ ಸಮೂಹ ಸಂಸ್ಥೆಗಳ  ಅಧ್ಯಕ್ಷ ಕಿಶೋರ್ ಅಳ್ವ,  ಮತ್ತಿತರರು ಬಾಗವಹಿಸಲಿದ್ದಾರೆ.  ವೇದಿಕೆಯಲ್ಲಿ ಸಹಕಾರಿ ಕ್ಷೇತ್ರದ ಭೀಷ್ಮ ,ಕಂಬಳ ಕ್ಷೇತ್ರದ ಅಪತ್ಬಾಂಧವ ಸಹಕಾರ ರತ್ನ ಎಂ.ಎನ್ ರಾಜೇಂದ್ರ ಕುಮಾರ್ ರವರಿಗೆ  ಪ್ರತಿಷ್ಠಿತ ಕಂಬಳ ರತ್ನ ಪ್ರಶಸ್ತಿ  ಸಹಿತ ಸಾಧಕರಿಗೆ ಗೌರವ ಸನ್ಮಾನ ನಡೆಯಲಿದೆ ಎಂದು ಅವರು ತಿಳಿಸಿದರು.ಸುವರ್ಣ ಮಹೋತ್ಸವದ  ವಿಶೇಷತೆಯಾಗಿ  ಕಂಬಳದಲ್ಲಿ ಭಾಗವಹಿಸುವ ಎಲ್ಲಾ ಕೋಣಗಳ ಯಜಮಾನರಿಗೆ  ವಿಶೇಷ  ಗೌರವ,ವಿಜೇತ ಕೋಣಗಳಿಗೂ ಚಿನ್ನದ ಬಹುಮಾನದೊಂದಿಗೆ ನಗದು ಪುರಸ್ಕಾರ,ಸೆಮಿ ಫೈನಲ್ ಗೆ ಬಂದಿರುವ  ಕೋಣಗಳಿಗೂ ವಿಶೇಷ ಬಹುಮಾನ,ಕನೆ ಹಲಗೆ ವಿಭಾಗದಲ್ಲಿ ಭಾಗವಹಿಸುವ  ವಿಜೇತ ಕೋಣಗಳಿಗೆ ಚಿನ್ನದ ಬಹುಮಾನ ನೀಡಿ  ಗೌರವಿಸಲಾಗುವುದು ಎಂದರು. ಮುಂಬೈ ಸಮಿತಿಯ ಅಧ್ಯಕ್ಷ ಕುಶಲ ಭಂಡಾರಿ ಮಾತನಾಡಿ ಕಂಬಳಕ್ಕೆ ಮುಂಬೈಯಿಂದ ಕೂಡ ವಿಶೇಷ ಸಹಕಾರ ನೀಡಲಾಗುತ್ತದೆ.ಐಕಳೋತ್ಸವಕ್ಕಾಗಿ ಮುಂಬೈಯಿಂದ ಕೂಡ ನೂರಾರು ಮಂದಿ ಬರಲಿದ್ದಾರೆ ಎಂದರು. ಈ ಸಂದರ್ಭ  ಸಮಿತಿಯ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಪ್ರಧಾನ‌ಕಾರ್ಯದರ್ಶಿ ಸ್ವರಾಜ್ ಶೆಟ್ಟಿ ಮುಂಡ್ಕೂರು ದೊಡ್ಡಮನೆ, ಮುರಳೀಧರ ಶೆಟ್ಟಿ ಐಕಳಬಾವ, ಲೋಕೇಶ್ ಮುಚ್ಚೂರು, ಅಮರನಾಥ್, ಸುಕುಮಾರ್ ಭಂಡಾರಿ, ಸುರೇಶ್ ಕೊಂಡೆ, ಪ್ರಮೋದ್ ಕುಮಾರ್ ಐಕಳಬಾವ,ಪ್ರದೀಪ್ ಕುಮಾರ್ ರೈ, ಲವ ಶೆಟ್ಟಿ ಕಿನ್ನಿಗೋಳಿ, ಉದಯ ಶೆಟ್ಟಿ, ರವಿರಾಜ್ ಶೆಟ್ಟಿ, ಲೀಲಾಧರ ಶೆಟ್ಟಿ, ಸುಧಾಮ‌ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಐಕಳಬಾವ, ದಯೇಶ್ ಐಕಳ, ಶ್ರೀಶ ಸರಫ್ ಐಕಳ, ಶರತ್ ಶೆಟ್ಟಿ ಸ್ಥಳಂತಗುತ್ತು ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ