ಸಸಿಹಿತ್ಲು ಭಗವತೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಎಕ್ಕಾರು ವಲಯದ ಹೊರೆಕಾಣಿಕೆ ಸಭೆ
Monday, February 9, 2026
ಬಜಪೆ:ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾರ್ಚ್ 4 ರಿಂದ 8 ರ ತನಕ ಬ್ರಹ್ಮಕಲಶೋತ್ಸವವು ನಡೆಯಲಿದ್ದು,ಆಪ್ರಯುಕ್ತ ಎಕ್ಕಾರು ಗ್ರಾಮಸ್ಥರ ಹೊರೆಕಾಣಿಕೆ ಮೆರವಣಿಗೆಯ ಬಗ್ಗೆ ಎಕ್ಕಾರು ಬಂಟರ ಭವನದಲ್ಲಿ ಬಂಟರ ಸಂಘದ ಅಧ್ಯಕ್ಷ ರತ್ನಾಕರ್ ಶೆಟ್ಟಿ ಎಕ್ಕಾರು ಇವರ ಅಧ್ಯಕ್ಷತೆಯಲ್ಲಿ ಸಭೆಯು ನಡೆಯಿತು. ಸಭೆಯಲ್ಲಿ ಶ್ರೀ ಕ್ಷೇತ್ರ ಸಸಿಹಿತ್ಲುವಿನ ಆಡಳಿತ ಮೊಕ್ತೇಸರ ಚಂದ್ರಶೇಖರ್ ಬೆಲ್ಚಡ ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಉತ್ಸವಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ, ಕ್ಷೇತ್ರದಲ್ಲಿ ನಡೆಯಲಿರುವ ಬ್ರಹ್ಮಕಲಶಕ್ಕೆ ಸರ್ವರ ಸಹಕಾರ ಯಾಚಿಸಿದರು. ಈ ಸಂದರ್ಭ ಸಂತೋಷ ಬಂಡ್ರಿಯಾಲ್ ಮೇಲೆಕ್ಕಾರು, ಅನ್ನಸಂತರ್ಪಣ ಸಮಿತಿಯ ಅಧ್ಯಕ್ಷ ಮುರ ಸದಾಶಿವ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಎಕ್ಕಾರು,ಎಕ್ಕಾರು ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಆಚಾರ್ಯ, ಎಕ್ಕಾರು ಗ್ರಾ.ಪಂ ನ ಮಾಜಿ ಅಧ್ಯಕ್ಷರುಗಳಾದ ವಿಜಯ್ ಶೆಟ್ಟಿ ಕಿನ್ನಿಲ್ಲ, ಸುದೀಪ್ ಅಮೀನ್, ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಶೆಟ್ಟಿ ಎಕ್ಕಾರು, ಬ್ರಹ್ಮ ಕಲಶ ಸಮಿತಿಯ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ ದುರ್ಗಾನಗರ, ಹೊರೆಕಾಣಿಕೆ ಸಮಿತಿಯ ಸಂಚಾಲಕ ರಿತೇಶ್ ಶೆಟ್ಟಿ ಮೇಲೆಕ್ಕಾರು, ಮೇಲೆಕ್ಕಾರು ಯಕ್ಷಗಾನ ಸುವರ್ಣ ಸಮಿತಿಯ ಅಧ್ಯಕ್ಷ ಸರಪಳಿಗುತ್ತು ಶಂಕರ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ ಎಕ್ಕಾರ್, ಕ್ಷೇತ್ರದ ಗುರಿಕಾರ ಸುಧಾನಂದ ಗುರಿಕಾರ ಕಟೀಲು, ವಸಂತ ಎಕ್ಕಾರು ಭಗವತೀ ತೀಯಾ ಸಂಘದ ಗೌರವಾಧ್ಯಕ್ಷ ಸದಾನಂದ ಎಕ್ಕಾರು, ಎಕ್ಕಾರಿನ ವಿವಿಧ ಸಂಸ್ಥೆಗಳ ಅಧ್ಯಕ್ಷರುಗಳು , ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.ಬ್ರಹ್ಮಕಲಶ ಸಮಿತಿಯ ಪ್ರಧಾನ ಸಂಚಾಲಕ ರಾಜೇಂದ್ರ ಪ್ರಸಾದ್ ಎಕ್ಕಾರು ಸಭೆಯನ್ನು ನಿರ್ವಹಿಸಿದರು.