-->

ಧೃಡಸಂಕಲ್ಪದ ಶಕ್ತಿ ಇದ್ದಲ್ಲಿ ದೇವರ ಅಭಯ : ಅಜಿತ್‌ಕುಮಾರ್ ರೈ ಮಾಲಾಡಿ

ಧೃಡಸಂಕಲ್ಪದ ಶಕ್ತಿ ಇದ್ದಲ್ಲಿ ದೇವರ ಅಭಯ : ಅಜಿತ್‌ಕುಮಾರ್ ರೈ ಮಾಲಾಡಿ

ಬಜಪೆ:ಪ್ರತಿಯೊಬ್ಬರಲ್ಲಿ ಧೃಡಸಂಕಲ್ಪದ ಶಕ್ತಿ ಇದ್ದಲ್ಲಿ ದೇವರ ಅಭಯ ಪ್ರಾಪ್ತಿಯಾಗುತ್ತದೆ. ಯೋಚಿಸಿದ ಯೋಜನೆಯ ಕಾರ್ಯಸಿದ್ದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಬೆಂಬಲ ಅಗತ್ಯವಿದೆ. ಪುರಾತನ ದೇವಾಲಯಗಳು ಕಾಲಕ್ಕೆ ತಕ್ಕಂತೆ ಜೀರ್ಣೋದ್ಧಾರಗೊಳ್ಳಬೇಕು ಎಂದು ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ ಹೇಳಿದರು. 
ಬಜಪೆ ಸಮೀಪದ  ಅದ್ಯಪಾಡಿಯ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಚಪ್ಪರ ಮುಹೂರ್ತವನ್ನು ನೆರವೇರಿಸಿ ಮಾತನಾಡಿದರು. 
ಮಾಜಿ ಸಚಿವ ನಾಗರಾಜ್ ಶೆಟ್ಟಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಿಸಿದರು. 
ಅಜಿತ್ ಕುಮಾರ್ ರೈ ಮಾಲಾಡಿ
ದೇವಸ್ಥಾನದ ಆಡಳಿತ ಮೊಕ್ತೇಸರ ಶೆಡ್ಯೆ ಮಂಜುನಾಥ ಭಂಡಾರಿ ಅಧ್ಯಕ್ಷತೆಯನ್ನು ವಹಿಸಿದ್ದರು. 
ವಿವಿಧ ಸಮಿತಿಯ ಭುಜಂಗ ಕುಲಾಲ್, ರಾಜೀವ ಆಳ್ವಾ, ಶಿವರಾಮ್ ಮಲ್ಲಿ, ರಮಾನಂದ ಅತ್ತಾರ್, ದೇವದಾಸ್ ನಾಯಕ್, ಅರ್ಚಕ ರಮೇಶ್ ಉಡುಪ,  ಕೃಷ್ಣಮೂರ್ತಿ, ಕೃಷ್ಣ ಭಟ್, ಸಂಜೀತ್ ಶೆಟ್ಟಿ, ಆಶಾಜ್ಯೋತಿ ರೈ, ರಂಗೋಲಿ ಚಂದ್ರಹಾಸ ಶೆಟ್ಟಿ, ಬೈಲು ಮೇಗಿನ ಮನೆ ಬಂಟ ಪೂಜಾರಿ, ವಿವಿಧ ಉಪ ಸಮಿತಿಯ ಪ್ರಮುಖರು, ದೇವಸ್ಥಾನದ ಟ್ರಸ್ಟಿಗಳು, ಗ್ರಾಮಸ್ಥರು ಮತ್ತಿತರರು ಇದ್ದರು. ದಿವಾಕರ ಸಾಮಾನಿ ಕಾರ್ಯಕ್ರಮ  ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ