-->

ಅದ್ಯಪಾಡಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶ,ಚಪ್ಪರ ಮುಹೂರ್ತ

ಅದ್ಯಪಾಡಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶ,ಚಪ್ಪರ ಮುಹೂರ್ತ


ಬಜಪೆ:ಪ್ರತಿಯೊಬ್ಬರಲ್ಲಿ ಧೃಡಸಂಕಲ್ಪದ ಶಕ್ತಿ ಇದ್ದಲ್ಲಿ ದೇವರ ಅಭಯ ಪ್ರಾಪ್ತಿಯಾಗುತ್ತದೆ. ಯೋಚಿಸಿದ ಯೋಜನೆಯ ಕಾರ್ಯಸಿದ್ದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಬೆಂಬಲ ಅಗತ್ಯವಿದೆ. ಪುರಾತನ ದೇವಾಲಯಗಳು ಕಾಲಕ್ಕೆ ತಕ್ಕಂತೆ ಜೀರ್ಣೋದ್ಧಾರಗೊಳ್ಳಬೇಕು ಎಂದು ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ  ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ ಹೇಳಿದರು. 
ಅವರು ಬಜಪೆ ಸಮೀಪದ  ಅದ್ಯಪಾಡಿಯ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ  ಮಾ.15 ರಿಂದ ಮಾ.20 ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ  ನಡೆದ ಚಪ್ಪರ ಮುಹೂರ್ತ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಮಾಜಿ ಸಚಿವ ಬಿ.ನಾಗರಾಜ್ ಶೆಟ್ಟಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಿಸಿದರು.  
ಈ ಸಂದರ್ಭ ಪವಿತ್ರಪಾಣಿ ವೇದಮೂರ್ತಿ ಎ.ರಮೇಶ್ ಭಟ್ ,ಅರ್ಚಕ ಕೃಷ್ಣ ಭಟ್ ,ಅದ್ಯಪಾಡಿ ದೇವಳದ ಅರ್ಚಕ ಸದಾಶಿವ ಭಟ್‌, ದೇವಳದ ಆಡಳಿತ ಮೊಕ್ತೇಸರ ಎ.ಮಂಜುನಾಥ ಭಂಡಾರಿ ಶೆಡ್ಯೆ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ,ಸಂತೋಷ್ ಶೆಟ್ಟಿ ಶೆಡ್ಯೆ,ಭುಜಂಗ ಕುಲಾಲ್, ರಾಜೀವ ಆಳ್ವ ಅದ್ಯಪಾಡಿಗುತ್ತು, ಅರ್ಬಿ ಶಿವರಾಮ್ ಮಲ್ಲಿ  , ರಮಾನಾಥ ಅತ್ತಾರ್, ದೇವದಾಸ್ ನಾಯಕ್,   ಕೃಷ್ಣಮೂರ್ತಿ, ಅನಿಲ್ ಬಲ್ಲಾಲ್, ಸಂಜೀತ್ ಶೆಟ್ಟಿ, ಆಶಾಜ್ಯೋತಿ ರೈ, ಉದ್ಯಮಿ  ಚಂದ್ರಹಾಸ ಶೆಟ್ಟಿ, ಬೈಲು ಮೇಗಿನ ಮನೆ ಬಂಟ ಪೂಜಾರಿ, ಮುರಳೀಧರ  ರಾವ್ ,ಸುಜೀರ್ ಕುಮಾರ್ ಶೆಟ್ಟಿ,ಜಯರಾಮ ಕೊಟ್ಟಾರಿ,ದಿನೇಶ್ ಮಾರ್ತ,ವಿಜಯ ಶೆಟ್ಟಿ,ರತ್ನಾಕರ ಶೆಟ್ಟಿ,ಹರೀಶ್ ಶೆಟ್ಟಿ ಏತಮೊಗರುಗುತ್ತು,ಸತೀಶ್ ಆಳ್ವಬೈಲು ಮೂಡುಕರೆ,ಸುಕೇಶ್ ಮಾಣಾಯಿ,ಜೀವನ್ ಮಲ್ಲಿ,ವೇಣುಗೋಪಾಲ ಶೆಟ್ಟಿ,ಸುಂದರ ಬಿ.ಬಂಗೇರ,ವಿವಿಧ  ಸಮಿತಿಗಳ ಪ್ರಮುಖರುಗಳು, ದೇವಸ್ಥಾನದ ಟ್ರಸ್ಟಿಗಳು, ಗ್ರಾಮಸ್ಥರು  ಹಾಗೂ ಮೊದಲಾದವರು  ಉಪಸ್ಥಿತರಿದ್ದರು. ದಿವಾಕರ ಸಾಮಾನಿ ಕಾರ್ಯಕ್ರಮ  ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ