Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಜಪೆ:ಥಂಡರ್ ಗೈಸ್ ಫೌಂಡೇಶನ್ ಬಜ್ಪೆ ಇದರ 31ನೆಯ ವರ್ಷದ ಸಂಭ್ರಮಾಚರಣೆ , ಸಂವತ ಬೀಟ್ ಆಫ್ ಡಾನ್ಸ್ ರಿಯಾಲಿಟಿ ಶೋ ಫೈನಲ್ ಸ್ಪರ್ಧೆ

ಬಜಪೆ:ಥಂಡರ್ ಗೈಸ್ ಫೌಂಡೇಶನ್ ಬಜ್ಪೆ ಇದರ 31ನೆಯ ವರ್ಷದ ಸಂಭ್ರಮಾಚರಣೆ ಹಾಗೂ ಸಂಸ್ಥೆ ಆಯೋಜಿಸಿದ ಸಂವತ ಬೀಟ್ ಆಫ್ ಡಾನ್ಸ್ ರಿಯಾಲಿಟಿ ಶೋ ಫೈನಲ್ ಸ್ಪರ್ಧೆಯನ್ನು ಬಜಪೆ ಕೇಂದ್ರ ಮೈದಾನದಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಭುವನಾಭಿರಾಮ ಉಡುಪ  ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

 ಬಜಪೆಯ ರಾಜಶ್ರೀ ಚಿಲ್ಡಿಂಗ್ ನ ಮಾಲಕ  ಶ್ರೀಮತಿ ಕೃಷ್ಣ ಕಲ್ಲೋಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
 ಮ್ಯಾಪ್ಸ್  ಗ್ರೂಪ್ ಆಫ್ ಇನ್ಸಿಟ್ಯೂಶನ್ಸ್, ಮಂಗಳೂರು ನ ಚೇರ್ ಮೇನ್ ದಿನೇಶ್ ಆಳ್ವ  ಅವರು ರಿಯಾಲಿಟಿ ಶೋ ಫೈನಲ್ ಸ್ಪರ್ಧಿಗಳಾದ  ಏಳು ಮಂದಿಗೆ  ತಮ್ಮ ಸಂಸ್ಥೆಯಲ್ಲಿ ಯಾವುದೇ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಐವತ್ತು ಪ್ರತಿಶತ ವಿನಾಯಿತಿಯನ್ನು ನೀಡುವುದಾಗಿ ಘೋಷಿಸಿದರು
ಈ ಸಂದರ್ಭ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ  ಡೆನ್ನಿಸ್ ಡಿ'ಸೋಜ ,ಕಟೀಲು ಶ್ರೀ ಡೆವಲಪರ್ಸ್ ನ ಗಿರೀಶ್ ಕಟೀಲು,
ಪುನರೂರು ಪ್ರತಿಷ್ಠಾನ (ರಿ) ನ ಅಧ್ಯಕ್ಷ ದೇವಪ್ರಸಾದ್ ಪುನರೂರು,ಪ್ರಮುಖರಾದ ಈಶ್ವರ್ ಕಟೀಲು, ಉದ್ಯಮಿ 
ವಿದುಶೇಖರ್ ನಾಯ್ಕ ಉಡುಪಿ,ಎಕ್ಕಾರು ಬಂಟರ ಸಂಘದ ಅಧ್ಯಕ್ಷ  ರತ್ನಾಕರ ಶೆಟ್ಟಿ,ಕಟೀಲು ಪದವಿ ಪೂರ್ವ ಕಾಲೇಜಿನ ಹಲಕೆ ವಿದ್ಯಾರ್ಥಿಸಂಘದ ಅಧ್ಯಕ್ಷ 
ಕಿರಣ್ ಶೆಟ್ಟಿ,ಉದ್ಯಮಿ 
 ಸಂತೋಷ್ ಅಂಬಾಲ್  ಬಜಪೆ,ಬಜಪೆ ಪ. ಪಂ ಕೌನ್ಸಿಲರ್ 
 ರಿತೇಶ್ ಶೆಟ್ಟಿ, ಬಜಪೆ ಜಿ.ಎಸ್.ಬಿ. ಸೇವಾ ಸಮಿತಿ (ರಿ) ಅಧ್ಯಕ್ಷ ಶ್ರೀ ಸುಧಾಕರ್ ಕಾಮತ್ ,ಉಡುಪ ಕಾಂಪ್ಲೆಕ್ಸ್, ಕಿನ್ನಿಗೋಳಿ  ಮಾಲಕ ಬಾಲಕೃಷ್ಣ ಉಡುಪ,ಬಜಪೆ ಪ.ಪಂ ಅಧ್ಯಕ್ಷ  ಲೋಕೇಶ್ ಪೂಜಾರಿ,ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಡಾ. ಅನಿತ್ ಕುಮಾರ್ ಹಾಗೂ ಯುವರಾಜ್ ಶೆಟ್ಟಿ, ಮೇಲ್ವಿಚಾರಕರಾದ ಶ್ರೀಮತಿ ಜಯಶ್ರೀ ಎಸ್ ಶೆಟ್ಟಿ, ಸಲಹೆಗಾರರಾದ ಸುರೇಶ್ ಅಡ್ಡೂರು,  ದೀಕ್ಷಿತ್ ಮಾಡ ಕಾರ್ಯನಿರ್ವಾಹಕರಾದ ಕುಮಾರಿ ನಿಖಿತಾ ಎಂ ಕೆ ಬಜಪೆ ನಿಖಿಲ್ ಎಂಕೆ ಬಜಪೆ ಉಪಸ್ಥಿತರಿದ್ದರು.



ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ರೊನಾಲ್ಡ್ ಫೆರ್ನಾಂಡಿಸ್ ಪೆರ್ಮುದೆ ಅವರು ಥಂಡರ್ ಗೈಸ್ ಸಂಸ್ಥೆಯು ಆಯೋಜಿಸಿದ ರಿಯಾಲಿಟಿ ಶೋ ಸಂವತ ಬೀಟ್ ಆಫ್ ಡಾನ್ಸ್ ಇದರ ಬಹುಮಾನಗಳನ್ನು ಅನಾವರಣಗೊಳಿಸಿದರು. 
ರಿಯಾಲಿಟಿ ಶೋ  ನ  ಫೈನಲ್ ಸ್ಪರ್ಧೆಯ ಸೆಲೆಬ್ರಿಟಿ ತೀರ್ಪುಗಾರರಾದ  ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ,
 ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 98 ಪ್ರತಿಶತ ಅಂಕಗಳನ್ನು ಪಡೆದ    ಸಂಸ್ಥೆಯ ವಿದ್ಯಾರ್ಥಿ ಕುಮಾರಿ ವೋಲಿಷ ರವರನ್ನು ಸನ್ಮಾನಿಸಲಾಯಿತು.

 ಕೊರಿಯೋಗ್ರಾಫರ್ ರಾಜೇಶ್ ಭಟ್, ಚಲನಚಿತ್ರ ನಟ  ಅನುಪ್ ಸಾಗರ್, ಕುಮಾರಿ ನಿಕಿತಾ ಎಂ ಕೆ ತೀರ್ಪುಗಾರರಾಗಿದ್ದರು.ರಿಯಾಲಿಟಿ ಶೋ  ನಲ್ಲಿ  ಪ್ರಥಮ ಸ್ಥಾನ ನಕ್ಷತ್ರ ತೊಕ್ಕೊಟ್ಟು,ದ್ವಿತೀಯ ಸ್ಥಾನ ಮಾನ್ವಿ ಆರ್ ಕೋಟೆಶ್ವರ,  ತೃತೀಯ ಸ್ಥಾನ ವೈಭವಿ ಬೆಂಜನ ಪದವು ಪಡೆದರು.
ಸಂಸ್ಥೆಯ ಅಧ್ಯಕ್ಷ ಹಾಗೂ ನಿರ್ದೇಶಕ  ಸೂರಜ್ ಶೆಟ್ಟಿ  ಸ್ವಾಗತಿಸಿದರು.ರಾಜೇಂದ್ರ ಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
.