ಹಿಂದೂ ಸಂಗಮ ಆಯೋಜನಾ ಸಮಿತಿ ಗುರುಪುರ ತಾಲೂಕು,ಎಕ್ಕಾರು ಮಂಡಲದ ತೆಂಕಎಕ್ಕಾರು, ಬಡಗಎಕ್ಕಾರು ಮತ್ತು ಪೆರ್ಮುದೆ ಗ್ರಾಮಗಳನ್ನೊಳಗೊಂಡ ಹಿಂದೂ ಸಂಗಮ ಕಾರ್ಯಕ್ರಮ
ತೆಂಕಎಕ್ಕಾರು, ಬಡಗಎಕ್ಕಾರು ಮತ್ತು ಪೆರ್ಮುದೆ ಗ್ರಾಮಗಳನ್ನೊಳಗೊಂಡ ಹಿಂದೂ ಸಂಗಮ ಕಾರ್ಯಕ್ರಮವು ನಾಳೆ ಮಧ್ಯಾಹ್ನ 3 ಕ್ಕೆ ಎಕ್ಕಾರು ಬಂಟರ ಸಂಘದ ವಠಾರದಲ್ಲಿ ನಡೆಯಲಿದೆ.ಮಧ್ಯಾಹ್ನ 2 ರಿಂದ ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ದ್ವಾರದ ಬಳಿಯಿಂದ ಎಕ್ಕಾರು ಬಂಟರ ಭವನದವರೆಗೆ ಭವ್ಯ ಶೋಭಾಯಾತ್ರೆಯು ನಡೆಯಲಿರುವುದು ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದಲ್ಲಿ ಕಟೀಲು ದೇವಳದ ಅನುವಂಶಿಕ ಅರ್ಚಕ ವೇದಮೂರ್ತಿಕಮಲಾದೇವಿಪ್ರಸಾದ ಆಸ್ರಣ್ಣ ಅವರು ಆಶೀರ್ವಚನ ನೀಡಲಿದ್ದಾರೆ.ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಹಾಗೂ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.