ಏಳಿಂಜೆಯ ಖಾಸಗಿ ಕಾರ್ಯಕ್ರಮದಲ್ಲಿ ಅಂಧ್ರಪ್ರದೇಶದ ರಾಜ್ಯಪಾಲರು
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಎಸ್. ಅಬ್ದುಲ್ ನಜೀರ್ ಅವರು ಶುಕ್ರವಾರದಂದು ಏಳಿಂಜೆ ಕೊಜಪಾಡಿ ಜಯಕುಮಾರ್ ಶೆಟ್ಟಿಯವರ ಮನೆಗೆ ಭೇಟಿ ನೀಡಿದರು. ಜಯಕುಮಾರ್ ಅವರ ಮಗಳು ಎಡ್ವಕೇಟ್ ಆದ ದೀಕ್ಷಾ ಅವರು ಈ ಹಿಂದೆ ಅಬ್ದುಲ್ ನಜೀರ್ ಬಳಿ ತರಬೇತಿ ಪಡೆದಿದ್ದು, ಫೆಬ್ರವರಿ 6 ರಂದು ದೀಕ್ಷಾ ರವರ ಮದುವೆ ಇದ್ದು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಅನಾನುಕೂಲವಾದರಿಂದ ಮದುವೆಗೆ ಮುಂಚಿತವಾಗಿ ಶುಕ್ರವಾರ ದೀಕ್ಷಾ ಮನೆಗೆ ಭೇಟಿ ನೀಡಿದರು. ಈ ಸಂದರ್ಭ ಬಾಲಕೃಷ್ಣ, ಜಯಕುಮಾರ್, ಪತ್ನಿ ಶಕುಂತಳ ಮದುಮಗಳು ದೀಕ್ಷಾ, ಕುಟುಂಬವರ್ಗದವರು, ಐಕಳ ಗ್ರಾ.ಪಂ ಅಧ್ಯಕ್ಷ ದಿವಾಕರ ಚೌಟ, ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.