-->

ಶೀಘ್ರದಲ್ಲಿಯೇ ಸ್ಥಳೀಯ ಆಡಳಿತ ಚುನಾವಣೆ - ಮಿಥುನ್ ರೈ

ಶೀಘ್ರದಲ್ಲಿಯೇ ಸ್ಥಳೀಯ ಆಡಳಿತ ಚುನಾವಣೆ - ಮಿಥುನ್ ರೈ



ಕಿನ್ನಿಗೋಳಿ:ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮತ್ತು ಬಜ್ಪೆ ಪಟ್ಟಣ ಪಂಚಾಯತ್ ನ  ಚುನಾವಣೆಯು ಶೀಘ್ರದಲ್ಲಿಯೇ ನಡೆಯಲಿರುವುದರಿಂದ ಕಾರ್ಯಕರ್ತರು ಸಜ್ಜಾಗುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ ರೈ ಕರೆ ನೀಡಿದರು.ಅವರು ಮುಲ್ಕಿ ಬ್ಲಾಕ್ ಕಾಂಗ್ರೆಸ್ ನ ಮಾಸಿಕ ಸಭೆಯಲ್ಲಿ ಭಾಗವಹಿಸಿ ಕಿನ್ನಿಗೋಳಿ ಮತ್ತು ಬಜ್ಪೆ ಪಟ್ಟಣ ಪಂಚಾಯತ್ ನ ಪ್ರಥಮ ಆಡಳಿತವನ್ನೇ ಕಾಂಗ್ರೆಸ್ ಪಕ್ಷ ನಡೆಸಬೇಕು ಎಂಬ ದಿಟ್ಟ ನಿರ್ಧಾರದೊಂದಿಗೆ ಚುನಾವಣೆಯನ್ನು ಎದುರಿಸಬೇಕಾಗಿದೆ. ಈ ಬಗ್ಗೆ ಎಲ್ಲ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ,ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಬೇಕು ಎಂದು ನುಡಿದರು.

ಈ ಚುನಾವಣೆಯೊಂದಿಗೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಕೂಡ ನಡೆಯಲಿರುವುದರಿಂದ ಈ ಞಬಗ್ಗೆ ಕೂಡ ಕಾರ್ಯ ತತ್ಪರರಾಗಬೇಕು  ಎಂದು ಕರೆ ನೀಡಿದರು.

ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಕೋಟ್ಯಾನ್  ಅಧ್ಯಕ್ಷತೆ ವಹಿಸಿದ್ದರು..

ಕೆಪಿಸಿಸಿ ಸದಸ್ಯರಾದ ಎಚ್ ವಸಂತ ಬರ್ನಾಡ್, ಡಿಸಿಸಿ ಸದಸ್ಯರಾದ  ಮೋನಪ್ಪ ಶೆಟ್ಟಿ ಎಕ್ಕಾರು, ಬ್ಲಾಕ್ ಉಪಾಧ್ಯಕ್ಷರಾದ ಹಸನಬ್ಬ ಬಾಳ, ನಾಯಕರುಗಳಾದ ಗುರುರಾಜ್ ಎಸ್ ಪೂಜಾರಿ, ಟಿ ಎಚ್ ಮಯ್ಯದಿ, ಪ್ರಮೋದ್ ಕುಮಾರ್ ,ಆಲ್ವಿನ್, ಬಿಜೆ ರಹಿಮ್, ಮೊದಲಾದವರು ಉಪಸ್ಥಿರಿದ್ದರು ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಂಬಾರ ವಂದಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ