Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ವಿದ್ಯಾರ್ಥಿ ನಾಯಕ ಚುನಾವಣೆಯಲ್ಲಿ ಜನಪ್ರಿಯ ನಾಯಕತ್ವಕ್ಕೆ ಬೆಂಬಲ

ಮೂಲ್ಕಿ:ಇಲ್ಲಿನ ಶ್ರೀ ನಾರಾಯಣ ಗುರು ವಿದ್ಯಾಸಂಸ್ಥೆಯಲ್ಲಿ ಮಂಗಳವಾರದಂದು ಪ್ರೌಢಶಾಲೆ ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ದ ಅರಿವು ಮೂಡಿಸಲು, ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಪ್ರೌಢಶಾಲೆ ವಿಭಾಗದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿ ನಮಿತ್. ಜಿ. ಅಂಚನ್ ಅವರು,"ಎಸ್. ಪಿ. ಎಲ್" ಸ್ಥಾನಕ್ಕೆ, ಕಾಲೇಜು ವಿಭಾಗದಲ್ಲಿ ಆಯುಷ್ ಶೆಟ್ಟಿ ಯವರು "ಸಿ. ಪಿ. ಎಲ್ " ಸ್ಥಾನಕ್ಕೆ ಆಯ್ಕೆಯಾಗಿರುತ್ತಾರೆ.
ಈ ವಿದ್ಯಾರ್ಥಿ ಚುನಾವಣೆಯು ಶಾಲಾ, ಕಾಲೇಜಿನ ಸಂಪೂರ್ಣ ವಾತಾವರಣವನ್ನು ಸಕಾರಾತ್ಮಕವಾಗಿ ಪ್ರಭಾವಿತಗೊಳಿಸಿದ್ದು, ಪ್ರಾಮಾಣಿಕ ಚುನಾವಣೆ, ಪ್ರಚಾರ, ಮತದಾನ ಹಾಗೂ ಫಲಿತಾಂಶ ಘೋಷಣೆ ಎಲ್ಲವೂ ಅಧ್ಯಾಪಕವೃಂದ, ಪ್ರಾ0ಶುಪಾಲರು, ಆಡಳಿತಾಧಿಕಾರಿ ಯವರ ಸಹಕಾರದಿಂದ ಶಿಸ್ತಿನಿಂದ ಜರಗಿತು.