ಶಿಮಂತೂರು ಯುವಕ ಮಂಡಲದ ಆಶ್ರಯದಲ್ಲಿ "ಕೆಸರ್ ಡೊoಜಿ ದಿನ"ಕಾರ್ಯಕ್ರಮ
ಮುಲ್ಕಿ: ಇಂದಿನ ಯುವ ಜನಾಂಗಕ್ಕೆ ಕೃಷಿ ಕಾರ್ಯಗಳ ಬಗ್ಗೆ ತಿಳಿಸುವ ಕಾರ್ಯ ಮಾಡಬೇಕಿದೆ. ಕೆಸರುಗದ್ದೆ ಕ್ರೀಡಾಕೂಟದ ಮೂಲಕ ಗ್ರಾಮದಲ್ಲಿ ಒಗ್ಗಟ್ಟು ಮೂಡಿಸುವ ಸೇವಾ ಸಂಸ್ಥೆಗಳ ಕಾರ್ಯ ಅಭಿನಂದನೀಯ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಅವರು ಆದಿತ್ಯವಾರದಂದು ಶಿಮಂತೂರು ದೇವಸ್ಥಾನದ ಬಳಿಯಲ್ಲಿ ಶಿಮಂತೂರು ಯುವಕ ಮಂಡಲದ ಆಶ್ರಯದಲ್ಲಿ ನಡೆದ ಚತುರ್ಥ ವರ್ಷದ "ಕೆಸರ್ ಡೊoಜಿ ದಿನ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್ ದೀಪ ಪ್ರಜ್ವಲನೆಗೊಳಿಸಿ ಶುಭ ಹಾರೈಸಿದರು.ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದ ಅರ್ಚಕರಾದ ಪುರುಷೋತ್ತಮ ಭಟ್ ಆಶೀರ್ವಚನ ನೀಡಿದರು
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ ಕೃಷಿಗೆ ಪೂರಕವಾಗಿ ಗ್ರಾಮದಲ್ಲಿ ಯುವಕ ಮಂಡಲದ ಸೇವಾ ಕಾರ್ಯಕ್ರಮ ಶ್ಲಾಘನೀಯ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅತಿಕಾರಿಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಮನೋಹರ ಕೋಟ್ಯಾನ್ ವಹಿಸಿ ಮಾತನಾಡಿ ಗ್ರಾಮದಲ್ಲಿ ಅನೇಕ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಯುವಕ ಮಂಡಲಕ್ಕೆ ಸ್ವಂತ ಕಟ್ಟಡದ ಅಗತ್ಯವಿದ್ದು ಶಾಸಕರ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸುಧಾಮ ಫೌಂಡೇಶನ್ ಅಧ್ಯಕ್ಷ ಸುನಿಲ್ ಆಳ್ವ, ಉದ್ಯಮಿ ಕಮಲಾಕ್ಷ ಬಡಗುಹಿತ್ಲು, ಶಿಕ್ಷಕಿ ಕಾಮೇಶ್ವರಿ ವಿಷ್ಣುಮೂರ್ತಿ ಭಟ್, ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ರೂಪ ವಿಷ್ಣುಮೂರ್ತಿ ಭಟ್, ಯುವಕ ಮಂಡಲದ ಅಧ್ಯಕ್ಷ ದೀಪಕ್ ಮತ್ತಿತರರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕರಾದ ಭುಜಂಗ ಶೆಟ್ಟಿ ಪರೆಂಕಿಲ, ಕಾಂತಪ್ಪ ಪೂಜಾರಿ ಶೇಡಿಕಟ್ಟ, ಹಾಗೂ ಶೈಕ್ಷಣಿಕ ಸಾಧನೆಗೆ ಹರ್ಷಿತಾ ಆರ್ ಶೆಟ್ಟಿ ರವರನ್ನು ಗೌರವಿಸಲಾಯಿತು
ಗೋಪಾಲ್ ಶಿಮಂತೂರು
ಧನ್ಯವಾದ ಅರ್ಪಿಸಿದರು
ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು
ಬಳಿಕ ಚತುರ್ಥ ವರ್ಷದ "ಕೆಸರ್ ಡೊoಜಿ ದಿನ" ಕಾರ್ಯಕ್ರಮ ನಡೆಯಿತು