Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಉಳ್ಳಂಜೆ ರಸ್ತೆಯಲ್ಲಿ ಅಪಾಯಕಾರಿ ಹೊಂಡ

ಕಟೀಲು:ಕಟೀಲಿನಿಂದ ಉಳ್ಳಂಜೆ ಮೂಲಕ ಕಿನ್ನಿಗೋಳಿಗೆ ಸಂಪರ್ಕಿಸುವ ರಸ್ತೆಯ ಅಲ್ಲಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಗಾಗಿ ರಸ್ತೆಯ ಮಧ್ಯಭಾಗವನ್ನೆ ಅಗೆಯಲಾಗಿದ್ದು,ಇದರಿಂದ ರಸ್ತೆಯು ವಾಹನಿಗರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.ಈ ರಸ್ತೆಯಲ್ಲಿ  ಐದು ಕಡೆಗಳಲ್ಲಿ ರಸ್ತೆಯ ಮಧ್ಯಭಾಗವನ್ನು ಅಗೆಯಲಾಗಿದೆ.ಅಗೆದ ರಸ್ತೆಯನ್ನು ಕೆಲವೊಂದು ಕಡೆ ಕಲ್ಲುಗಳನ್ನು ಮುಚ್ಚಲಾಗಿದ್ದರೂ ಸುರಿದಂತಹ ಭಾರೀ ಮಳೆಗೆ ಮಳೆ ನೀರು ಹರಿದು ಹೊಂಡಗಳು ಉಂಟಾಗಿದೆ.ಇಲ್ಲಿನ ಉಳ್ಳಂಜೆಯಲ್ಲಿನ ಇಳಿಜಾರಿನಲ್ಲಿನ ಅಗೆದ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡ ಉಂಟಾಗಿದ್ದು,ವಾಹನಗಳ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.ಸಂಬಂಧಪಟ್ಟವರು  ಇತ್ತ ಕಡೆ ಗಮನಹರಿಸಿ ಆಪಾಯ ಸಂಭವಿಸುವ ಮುನ್ನವೇ ಅಗೆದರಸ್ತೆಯನ್ನು  ಮುಚ್ಚುವ ಕಾರ್ಯ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.