Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಭಾರತೀಯ ಜನತಾ ಪಾರ್ಟಿ ಹಳೆಯಂಗಡಿ ಮಹಾಶಕ್ತಿ ಕೇಂದ್ರ,ಹಳೆಯಂಗಡಿ ಪಂಚಾಯತ್ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಪ್ರತಿಭಟನೆ

ಹಳೆಯಂಗಡಿ:ಭಾರತೀಯ ಜನತಾ ಪಾರ್ಟಿ ಹಳೆಯಂಗಡಿ ಮಹಾಶಕ್ತಿ ಕೇಂದ್ರ,ಹಳೆಯಂಗಡಿ ಪಂಚಾಯತ್ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಪಂಚಾಯತ್ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.ಪ್ರತಿಭಟನೆಯಲ್ಲಿ  ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಗೂ ಮಂಡಲ ಕಾರ್ಯದರ್ಶಿ ಪೂರ್ಣಿಮಾ,  ಬಿಜೆಪಿ ಮುಖಂಡ  ಸತೀಶ್ ಭಟ್ ಕೊಳುವೈಲು , ಮಂಡಲ ಪ್ರಭಾರಿ ಶೈಲೇಶ್ ಮುಲ್ಕಿ , ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಅಶೋಕ್ ಬಂಗೇರ ಶೋಭೆಂದ್ರ ಸಸಿಹಿತ್ಲು, ಪಂಚಾಯತ್ ನ  ಉಪಾಧ್ಯಕ್ಷ ಚಂದ್ರಿಕಾ, ಪಂ .ಸದಸ್ಯರುಗಳು, ತಾಲೂಕು ಪಂಚಾಯತ್ ನ ಮಾಜಿ ಸದಸ್ಯ ಜೀವನ ಪ್ರಕಾಶ್ ಕಾಮೆರೊಟ್ಟು, ಶಕ್ತಿ ಕೇಂದ್ರದ ಪ್ರಮುಖರು, ಬೂತ್  ಅಧ್ಯಕ್ಷ ಕಾರ್ಯದರ್ಶಿಗಳು,ಬಿಜೆಪಿ  ಕಾರ್ಯಕರ್ತರು, ಪ್ರಮುಖರು ಪಾಲ್ಗೊಂಡರು.