Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ರೈಲ್ವೇಗೇಟ್ ಜಾಮ್ ,ರಸ್ತೆಯಲ್ಲಿ ಸಿಲುಕಿದ ಅಂಬ್ಯುಲೆನ್ಸ್

ಹಳೆಯಂಗಡಿ:ರೈಲ್ವೇ ಗೇಟ್ ಜಾಮ್ ಆಗಿ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿದ್ದ  ಅಂಬ್ಯುಲೆನ್ಸ್  ಸುಮಾರು 20 ನಿಮಿಷಗಳ ಕಾಲ  ಸಿಲುಕಿದ ಘಟನೆ ಬುಧವಾರ ಸಂಜೆ  ಹಳೆಯಂಗಡಿಯ ಇಂದಿರಾ ನಗರ ರೈಲ್ವೇ ಗೇಟ್ ನಲ್ಲಿ  ನಡೆದಿದೆ. ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ರೈಲು   ಹಾದುಹೋಗುವ ಸಂದರ್ಭ ರೈಲ್ವೇ ಗೇಟನ್ನು ಹಾಕಲಾಗಿದ್ದು,ರೈಲು ಹಾದುಹೋದ ನಂತರ ರೈಲು ಗೇಟ್ ಒಂದು ಬದಿಯ ಜಾಮ್ ಆಗಿದೆ.ರೈಲ್ವೇ ಸಿಬ್ಬಂದಿ ಗೇಟ್ ತೆಗೆಯಲು ಹರಸಾಹಸ ಪಟ್ಟಿದ್ದರೂ  ಗೇಟ್ ಜಾಮ್ ಆದ ಕಾರಣ ತೆಗೆಯಲಾಗಲಿಲ್ಲ.ಇದರಿಂದ ಕೆಲ ಕಾಲ ಟ್ರಾಪಿಕ್ ಜಾಮ್ ಉಂಟಾಗಿತ್ತು.ಇದರ ನಡುವೆ ತುರ್ತಾಗಿ ರೋಗಿಯನ್ನು ಕೊಂಡೊಯ್ಯುತ್ತಿದ್ದ  ಅಂಬ್ಯುಲೆನ್ಸ್ ಟ್ರಾಪಿಕ್ ಜಾಮ್ ನಲ್ಲಿಯೇ ಸುಮಾರು 20 ನಿಮಿಷ ಸಿಲುಕಿ ಹಾಕಿಕೊಂಡಿತು.  ಕೊನೆಗೂ ರೈಲ್ವೇ ಸಿಬ್ಬಂದಿಯ ಹರಸಾಹಸಪಟ್ಟು ಗೇಟ್ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ತುರ್ತು ಪರಿಸ್ಥಿತಿಯ ಸಂದರ್ಭ ಗಳಲ್ಲಿ ಇಲ್ಲಿ ಭಾರೀ ಸಮಸ್ಯೆಯಾಗುತ್ತಿದ್ದು,ಇಲ್ಲಿ ರೈಲ್ವೇ ಮೇಲ್ಸೆತುವೆಯ  ನಿರ್ಮಾಣವಾಗಬೇಕಿದೆ ಎಂಬುದು ಹಲವು ವರ್ಷಗಳಿಂದ ಸ್ಥಳೀಯರು ಮನವಿಯ ಮೂಲಕ ಒತ್ತಾಯಿಸಿದ್ದರೂ ಇಂದಿಗೂ ಮೇಲ್ಸೇತುವೆಯ ನಿರ್ಮಾಣವಾಗಿಲ್ಲ.