ನಮ್ಮನ್ನು ನಾವು ಬದಲಾಯಿಸಿಕೊಂಡರೆ ಜಗತ್ತು ಬದಲಾಗುತ್ತದೆ - ಲಕ್ಷ್ಮೀನಾರಾಯಣ
ಬಜಪೆ:ನಮ್ಮನ್ನು ನಾವು ಬದಲಾಯಿಸಿಕೊಂಡರೆ ಜಗತ್ತು ಬದಲಾಗುತ್ತದೆ. ನಮ್ಮ ನಡವಳಿಕೆಯಲ್ಲಿ ಬದಲಾವಣೆ ಯಾಗಲು ಯೋಗ ಒಂದು ಪ್ರಮುಖ ಮಾಧ್ಯಮ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ಪ್ರಾಂತ ಪ್ರಶಿಕ್ಷಣ ಪ್ರಮುಖರಾದ ಲಕ್ಷ್ಮೀನಾರಾಯಣ ಹೇಳಿದರು.ಅವರು ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಮಂಗಳೂರು ಉತ್ತರ ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ಇದರ ವತಿಯಿಂದ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿ ವಿಶ್ವ ಯೋಗ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಎಕ್ಕಾರು ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಆಚಾರ್ಯ, ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಉಮೇಶ್ ರಾವ್ ಎಕ್ಕಾರು, ಶ್ರೀ ಜಯರಾಮ ನೇತ್ರಾವತಿ ವಲಯ ಸಂಯೋಜಕ ಶ್ರೀಮತಿ ಕನಕ ,ಜಿಲ್ಲಾ ಸಂಯೋಜಕರು, ಯೋಗ ಶಿಕ್ಷಕರಾದ ಆನಂದ, ಕೇಶವ, ಪದ್ಮನಾಭ, ಗಂಗಾಧರ, ವಿಕಾಸ, ಎಕ್ಕಾರು ಗ್ರಂಥಾಲಯದ ಗ್ರಂಥಪಾಲಕಿ ಶ್ರೀಮತಿ ಹೇಮಲತಾ ಶರ್ಮಾ ಗ್ರಂಥಪಾಲಕಿ, ಎಸ್ ಡಿ ಎಂ ಸಿ ಸದಸ್ಯರಾದ ಶ್ಯಾಮಲ ಶ್ರೀಮತಿ ಲತಾ ರಾವ್ , ಶ್ರೀಮತಿ ಭಾನು,ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಇಂದಿರಾ ಎನ್ .ರಾವ್ ಉಪಸ್ಥಿತರಿದ್ದರು.
ಶಿಕ್ಷಕಿ ಶ್ರೀಮತಿ ವಿದ್ಯಾಲತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ವಿನ್ನಿ ನಿರ್ಮಲ ಡಿಸೋಜಾ ಯೋಗ ಪ್ರತಿಜ್ಞೆಯನ್ನು ಬೋಧಿಸಿದರು.ಶಿಕ್ಷಕಿ ಶ್ರೀಮತಿ ವಿದ್ಯಗೌರಿ ವಂದಿಸಿದರು.