ವಿಶ್ವ ಯೋಗ ದಿನಾಚರಣೆ ಪೂರ್ವಭಾವಿಯಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಯೋಗಾಭ್ಯಾಸ
ಬಜಪೆ:ಶ್ರೀಮತಿ ಕನಕ ಜಿಲ್ಲಾ ಯೋಗ ಸಂಯೋಜಕರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ, ಹಾಗೂ ಯೋಗ ಶಿಕ್ಷಕರುಗಳಾದ ಆನಂದ, ಗಂಗಾಧರ,ಮುರಳಿ ಇವರ ಮಾರ್ಗದರ್ಶನದಲ್ಲಿ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿ ಜೂ. 21ರಂದು ನಡೆಯುವ ವಿಶ್ವ ಯೋಗ ದಿನಾಚರಣೆಗೆ ಪೂರ್ವಭಾವಿಯಾಗಿ ವಿದ್ಯಾರ್ಥಿಗಳಿಗೆ ಯೋಗಭ್ಯಾಸವನ್ನು ಮಾಡಿಸಿದರು. ಯೋಗಭ್ಯಾಷದಲ್ಲಿ ಒಟ್ಟು 137 ವಿದ್ಯಾರ್ಥಿಗಳು , 10 ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಪಾಲ್ಗೊಂಡರು.