Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎಕ್ಕಾರು ಕಾಯ್ದಂಡ ನೇಮೋತ್ಸವ

ಬಜಪೆ :ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನಕ್ಕೆ ಸಂಬಂಧಪಟ್ಟ ಎಕ್ಕಾರು ಕಾಯ್ದಂಡ ನೇಮೋತ್ಸವವು  ಸೋಮವಾರದಂದು ಪ್ರಾರಂಭಗೊಂಡಿತು.ನೇಮೋತ್ಸವವು   ಎ.11 ರ ತನಕ ವಿಜೃಂಭಣೆಯಿಂದ ಜರುಗಲಿದೆ. ಎಕ್ಕಾರು  ಕಾವರಮನೆಯಿಂದ ದೈವಗಳ  ಭಂಡಾರ ಹೊರಟು  ಸವಾರಿಯ ಗದ್ದೆಗೆ  ಆಗಮಿಸಿ  ಕಾಯ್ದಂಡ ನೇಮೋತ್ಸವವು ಜರುಗುತ್ತದೆ. ನೇಮೋತ್ಸವದ ಅಂಗವಾಗಿ ಸೋಮವಾರ  ಮಧ್ಯಾಹ್ನ   ಶ್ರೀಉಲ್ಲಾಯ ದೈವದ ನೇಮವು ವಿಜೃಂಭಣೆಯಿಂದ ಜರುಗಿತು.ಬಳಿಕ ಭಕ್ತರು ಅನ್ನ ಪ್ರಸಾದವನ್ನು ಸ್ವೀಕರಿಸಿದರು.ಈ ಸಂದರ್ಭ  ಎಕ್ಕಾರು ಶ್ರೀಗೋಪಾಲಕೃಷ್ಣಮಠದ  ಮೊಕ್ತೇಸರ  ವೇದಮೂರ್ತಿ ಹರಿದಾಸ ಉಡುಪ,ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ (ತಿಮ್ಮ ಕಾವರು),ಭಾಸ್ಕರ ಮುದ್ದ ನಡ್ಯೋಡಿಗುತ್ತು,ರತ್ನಾಕರ ಶೆಟ್ಟಿ ಬಡಕರೆ ಬಾಳಿಕೆ,ರಮೇಶ್ ಭಂಡಾರಿ  ಮಿತ್ತೋಟ್ಟು ಬಾಳಿಕೆ ಮೇಲೆಕ್ಕಾರು,4 ಕರೆ 32 ವರ್ಗ ,ಊರಹತ್ತು ಸಮಸ್ತರು  , ಪ್ರಮುಖರಾದ ಮೋನಪ್ಪ ಶೆಟ್ಟಿ ಎಕ್ಕಾರು,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ  ಮಿಥುನ್ ರೈ ಹಾಗೂ ಗಣ್ಯಾತೀಗಣ್ಯರು,ಪ್ರಮುಖರುಗಳು  ಉಪಸ್ಥಿತರಿದ್ದರು.

ಸೋಮವಾರ  ರಾತ್ರಿ ಶ್ರೀಕೊಡಮಣಿತ್ತಾಯ ದೈವದ ನೇಮವು  ನಡೆಯಿತು.ಎ.8 ರ ಮಂಗಳವಾರದಂದು ರಾತ್ರಿ 10 ರಿಂದ ಶ್ರೀಕಾಂತೇರು ಜುಮಾದಿ ದೈವದ ನೇಮ,ಎ.9 ಬುಧವಾರ ರಾತ್ರಿ 10 ರಿಂದ  ಜಾರಂದಾಯ ಬಂಟ ದೈವದ ನೇಮ,ಎ.10 ರ ಗುರುವಾರ ರಾತ್ರಿ 10 ರಿಂದ ಶ್ರೀ ಸರಳ ಜುಮಾದಿ ದೈವದ ನೇಮ,ಎ.11 ರ ಶುಕ್ರವಾರ ರಾತ್ರಿ 10 ರಿಂದ ಪಿಲಿಚಾಮುಂಡಿ ದೈವದ ನೇಮ ನಂತರ ದೈವಗಳ ಭಂಡಾರ ಇಳಿಯುವುದು .ಸಾಂಸ್ಕೃತಿಕ ಕಾರ್ಯಕ್ರಮಗಳ  ಅಂಗವಾಗಿ
ಎ.7 ರಂದು ಸಂಜೆ 6:30 ರಿಂದ
ದುರ್ಗಾ ಕಲ್ಚರಲ್ ಅ್ಯಂಡ್ ಕ್ರಿಕೆಟ್ ಕ್ಲಬ್ ಎಕ್ಕಾರು ಹಾಗೂ  ದುರ್ಗಾ ಮಹಿಳಾ ಮಂಡಳಿ   ಇವರ ಪ್ರಾಯೋಜಕತ್ವದಲ್ಲಿ ಬಾಲಗೋಕುಲ ಮಕ್ಕಳಿಂದ ಹಾಗೂ ದುರ್ಗಾ ಮಹಿಳಾ ಮಂಡಳಿ ಸದಸ್ಯರಿಂದ ಸಾಂಸ್ಕೃತಿಕ  ಕಾರ್ಯಕ್ರಮ ,ದುರ್ಗಾ ಯಕ್ಷ ನಾಟ್ಯ ತರಗತಿಯ ಮಕ್ಕಳಿಂದ ಯಕ್ಷಗಾನ ಮಹಿಷ ಮರ್ಧಿನಿ ,ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು,ಎ.9 ರಂದು  ಸಂಜೆ 6:30 ರಿಂದ ವಿಜಯ ಯುವ ಸಂಗಮ(ರಿ)ಎಕ್ಕಾರು ಪ್ರಾಯೋಜಕತ್ವದಲ್ಲಿ   ಥಂಡರ್ ಗೈಸ್ ಫೌಂಡೇಶನ್ (ರಿ)ಬಜಪೆ,  ಸೂರಜ್ ಶೆಟ್ಟಿ  ಬಜ್ಪೆ ನಿರ್ದೇಶನದಲ್ಲಿ  ಕ್ಷೇತ್ರ ಪುರಾಣ ಮಂಜರಿ ಭಕ್ತಿ ಭಾವದ ನೃತ್ಯ ಸಂಗಮ,ಎ.10 ರಂದು  ಸಂಜೆ 6:30 ರಿಂದ  ಕಾಯ್ದಂಡ ಯುವಕ ಮಂಡಲ (ರಿ)ಎಕ್ಕಾರು ಪ್ರಾಯೋಜಕತ್ವದಲ್ಲಿ  ಅಭಿನಯ ಕಲಾವಿದರು ಉಡುಪಿ ಅಭಿನಯಿಸುವ ಶಾಂಭವಿ ತುಳು ಹಾಸ್ಯಮಯ ನಾಟಕ,ಎ.11 ರಂದು ಚೈತನ್ಯ ಕಲಾವಿದರು ಬೈಲೂರುಇವರಿಂದ  ಅಷ್ಟೆಮಿ  ತುಳು ನಾಟಕ ನಡೆಯಲಿದೆ.